ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅ.1ರಂದು ಮಯೂರ ನೃತ್ಯ ಅಕಾಡೆಮಿಯ ಜಯೋಸ್ತುತೆ ದೇಶಭಕ್ತಿ ಗೀತೆಗಳ ನೃತ್ಯ ಸಂಭ್ರಮ

ಹುಬ್ಬಳ್ಳಿ: ಮಯೂರ ನೃತ್ಯ ಅಕಾಡೆಮಿ ಹುಬ್ಬಳ್ಳಿ ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ 75 ನೇ ಅಜಾದಿ ಕಾ ಅಮೃತಮಹೋತ್ಸವ ಅಂಗವಾಗಿ, ಜಯೋಸ್ತುತೆ ದೇಶಭಕ್ತಿ ಗೀತೆಗಳ ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಅಕ್ಟೋಬರ್ 1 ಮಧ್ಯಾಹ್ನ 3:30ಕ್ಕೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ವಿದುಷಿ ಹೇಮಾ ವಾಘಮೋಡೆ ಹೇಳಿದರು.

ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರಿಗೆ ನೃತ್ಯ ನಮನ ಸಲ್ಲಿಸುವ ಜಯೋಸ್ತುತೆ ಕಾರ್ಯಕ್ರಮದಲ್ಲಿ 350 ಕಲಾವಿದರು ಭಾಗವಹಿಸಲಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕರಾದ ರಘುನಂದನ್, ಹುಬ್ಬಳ್ಳಿಯ ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ.ಎಸ್.ವಿ ಪ್ರಸಾದ್, ಯೋಧರು ಹಾಗೂ ಸಮಾಜ ಸೇವಕರಾದ ಪರಶುರಾಮ ದಿವಾನದ, ಹಿಂದೂಸ್ತಾನ ಗಾಯಕರಾದ ವಿದುಷಿ ರೇಖಾ ಹೆಗಡೆ ವಹಿಸಲಿದ್ದಾರೆ ಎಂದರು.

Edited By : Somashekar
Kshetra Samachara

Kshetra Samachara

29/09/2022 12:47 pm

Cinque Terre

56.19 K

Cinque Terre

0

ಸಂಬಂಧಿತ ಸುದ್ದಿ