ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದಿ ಬೀದಿಯಲ್ಲಿ ಡಿಂಡಿಮ ಬಾರಿಸಿದ ನಾಸಿಕ್ ಡೊಳ್ಳು: ಯುವಶಕ್ತಿಯಿಂದ ಬೃಹತ್ ರಾಯಣ್ಣ ಯಾತ್ರೆ

ಹುಬ್ಬಳ್ಳಿ:ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಸಂಭ್ರಮದೊಂದಿಗೆ 75ನೇ ಸ್ವಾತಂತ್ರ್ಯ ಉತ್ಸವದ ಸಂಭ್ರಮದಲ್ಲಿದ್ದ ಹುಬ್ಬಳ್ಳಿ ಜನತೆಗೆ ರಾಯಣ್ಣ ಜಯಂತಿಯ ಸಂಭ್ರಮ ಕೂಡ ಕಳೆಗಟ್ಟಿದೆ

ಹೌದು ಇಂದು ಸಾಯಂಕಾಲ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಶಕ್ತಿ ವತಿಯಿಂದ ಯಲ್ಲಾಪುರ ಓಣಿ, ಪಾಟೀಲ್ ಗಲ್ಲಿ, ದೇಸಾಯಿ ಓಣಿಯ ರಾಯಣ್ಣ ಅನುಯಾಯಿಗಳು ನಾಸಿಕ್ ಡೊಳ್ಳಿನ ಮೆರವಣಿಗೆಯನ್ನ ಸುಮಾರು 5 ಕಿಲೋಮೀಟರ್ ವರೆಗೂ ನಡೆಸಿದರು.

ಬಂಕಾಪುರ ಚೌಕ್ ನಿಂದ ಶುರುವಾದ ಡೊಳ್ಳಿನ ನಾದದ ಮೆರವಣಿಗೆ ದುರ್ಗದಬೈಲ್ ಮೂಲಕ ಸಂಗೊಳ್ಳಿ ರಾಯಣ್ಣನ ಮೂರ್ತಿವರೆಗೂ ಜರುಗಿತು ,ಈ ವೇಳೆ ಯುವಕ ಯುವತಿಯರ ಡೊಳ್ಳಿನ ನಾದಕ್ಕೆ ಜನರು ಮನಸೋತು ಹೋದರು.

ಈ ವೇಳೆ ಮಾತನಾಡಿದ ಸಂಜೀವಗೌಡ ಪಾಟೀಲ DJ ,ಅಥವಾ ಇನ್ನಿತರೆ ಮನರಂಜನೆ ಮಾಡುವ ಬದಲು ಸಾಂಸ್ಕೃತಿಕ ನಾಸಿಕ್ ಡೊಳ್ಳು ತರಸಲಾಗಿದ್ದು ನಮ್ಮ ಸಂಸ್ಕೃತಿಯನ್ನ ನಾವು ಎಲ್ಲಾ ದಿನಗಳಲ್ಲಿ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.

ವಿನಯ ರೆಡ್ಡಿ,ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Somashekar
Kshetra Samachara

Kshetra Samachara

15/08/2022 07:22 pm

Cinque Terre

54.36 K

Cinque Terre

0

ಸಂಬಂಧಿತ ಸುದ್ದಿ