ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಂಗೀತದಲ್ಲೇ ಸಾಧನೆ ಹಠ ಮಾರುತಿಗೆ ಬೇಕಿದೆ ಪ್ರೋತ್ಸಾಹದ ಬಲ

ಕುಂದಗೋಳ : ಈ ಯುವಕನಿಗೆ ಸಂಗೀತ ಅಂದ್ರೇ ಬಲು ಇಷ್ಟ, ಆ ಸಂಗೀತದ ಮೂಲಕ ಎನಾದ್ರೂ ಸಾಧನೆ ಮಾಡಬೇಕೆಂದು ಸದಾ ಹಾತೊರೆಯುವ ಇವನು ಸಾಹಿತ್ಯ ಸಹ ಬರೀತಾನೆ ಅದು ಪ್ರಾಸಬದ್ಧವಾಗಿ ಅರ್ಥಗರ್ಭಿತವಾಗಿ.

ಹೌದು ! ಹೀಗೆ ಕೈಯಲ್ಲಿ ಮೈಕ್ ಕೊಟ್ರೆ ಸಾಕು ಕೇಳುಗರ ಕರ್ಣಗಳು ಇಂಪಾಗುವಂತೆ ಕರ್ನಾಟಕ, ಹಿಂದೂಸ್ಥಾನಿ, ಜಾನಪದ ಸಿನಿಮಾ ಸಂಗೀತ ಹಾಡುವ ಈತನ ಹೆಸರು ಮಾರುತಿ ಗೊಲ್ಲರ್ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವನು.

ಪ್ರಾಥಮಿಕ ಶಾಲೆಯಲ್ಲಿ ವೇದಿಕೆ ಏರಿ ಹಾಡುತ್ತಿದ್ದ ಈತ ಪ್ರೌಢ ಕಾಲೇಜು ಹಂತಕ್ಕೆ ಅತಿ ಸೊಗಸಾಗಿ ಹಾಡುತ್ತಾ ಸಂಗೀತ ಸಹ ಕಲಿತು ಈಗಾಗಲೇ ಜೀ ಕನ್ನಡದ ಸರಿಗಮಪ, ಕಲರ್ಸ್ ಕನ್ನಡ ಹಾಡು ಕರ್ನಾಟಕ, ಚಂದನ ವಾಹಿನಿ ಸೇರಿ ಹಲವಾರು ಅಡಿಷನ್ ಭಾಗವಹಿಸಿ ಮೆಚ್ಚುಗೆಗಳಿಸಿ ಪುನಃ ಸ್ಪರ್ಧೆಗೆ ಸಿದ್ಧನಾಗಿದ್ದಾನೆ.

ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಕಲೋತ್ಸವ ಜಾನಪದ ಉತ್ಸವಗಳಲ್ಲಿ ಭಾಗವಹಿಸಿದ ಈತನ ಮನೆಯಲ್ಲಿ ಪ್ರಶಸ್ತಿ ಪ್ರಮಾಣಪತ್ರಗಳೇ ತುಂಬಿವೆ.

ಕುಂದಗೋಳ ಪಟ್ಟಣದ ಜೆ.ಎಸ್.ಪಾಟೀಲ ಮಹಾವಿದ್ಯಾಲಯದಲ್ಲಿ ಬಿಎ ಪದವಿ ಪಡೆದ ಈತ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜನಮನ್ನಣೆ ಗಳಿಸಿದ್ದಾನೆ.

ಒಟ್ಟಾರೆ ತನ್ನ ಸಂಗೀತದ ಮೂಲಕವೇ ಏನಾದ್ರೂ ಸಾಧನೆ ಮಾಡಬೇಕೆಂಬ ಹಠವಾದಿ ಮಾರುತಿಗೆ ಇನ್ನೂ ದೊಡ್ಡ ವೇದಿಕೆ ಹಾಗೂ ಪ್ರೋತ್ಸಾಹ ಬೇಕಿದ್ದು 8746907567 ಕರೆ ಮಾಡಿ ಸಂಗೀತಗಾರ ಮಾರುತಿ ಗೊಲ್ಲರ್ ಸಂಪರ್ಕ ಮಾಡಬಹುದು.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ್ ಪೂಜಾರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/07/2022 08:58 am

Cinque Terre

75.5 K

Cinque Terre

1

ಸಂಬಂಧಿತ ಸುದ್ದಿ