ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ 21 ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರೆಯಲ್ಲಿ ಮಂಗಳವಾರ ಚಂಡೆ ವಾದನಗಳು ಸದ್ದು ಮಾಡಿವೆ. ಈ ಸದ್ದು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿವೆ.
ಉಡುಪಿ, ಮಂಗಳೂರು, ಧರ್ಮಸ್ಥಳ ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಚಂಡೆ ವಾದನ ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟೊಂದು ಬಳಕೆಯಲ್ಲಿಲ್ಲ. ಆದರೆ, ಈ ಚಂಡೆ ವಾದನದ ತಂಡದವರನ್ನು ಜಾತ್ರಾ ಮಹೋತ್ಸವದ ಅಂಗವಾಗಿ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಕರೆಯಿಸಲಾಗಿತ್ತು.
ಗ್ರಾಮದೇವಿ ದೇವಸ್ಥಾನದಲ್ಲಿ ಚಂಡೆ ವಾದನದ ತಂಡದವರು ಚಂಡೆ ಬಾರಿಸುತ್ತಿದುದನ್ನು ಕಂಡು ಗ್ರಾಮಸ್ಥರು ನಿಬ್ಬೆರಗಾಗಿ ನೋಡುತ್ತ ನಿಂತಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಚಂಡೆ ವಾದನ ಎಲ್ಲರ ಗಮನಸೆಳೆದಿದೆ.
Kshetra Samachara
10/05/2022 01:11 pm