ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಅಣ್ಣಿಗೇರಿಯಲ್ಲಿ ಹೋಳಿ ಹಬ್ಬದ ಸಂಭ್ರಮ

ಅಣ್ಣಿಗೇರಿ: ಕಳೆದ ಎರಡು ವರ್ಷಗಳಿಂದ ಕೋವಿಡ್ ಕರಿ ನೆರಳಿನಿಂದ ಹೋಳಿ ಹಬ್ಬವನ್ನು ರಾಜ್ಯ ಸೇರಿದಂತೆ ಪಟ್ಟಣದಲ್ಲಿ ಸಂಭ್ರಮವೇ ಇಲ್ಲದಂತಾಗಿತ್ತು. ಆದರೆ ಈ ಸಲ ಯಾವುದೇ ಸಾಂಕ್ರಾಮಿಕ ರೋಗಗಳು ಇಲ್ಲದೆ ಹಬ್ಬವನ್ನು ಪಟ್ಟಣದಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು.

ಯುವಕರು ಬಣ್ಣದ ಓಕುಳಿಯಲ್ಲಿ ಮಿಂದೆದ್ದರು. ಪಟ್ಟಣದ ಯಾವುದೇ ಬೀದಿಗೆ ಹೋದರೂ ಯುವಕರು ಡಿಜೆ ಹಾಡುಗಳಿಗೆ ನೃತ್ಯ ಮಾಡುತ್ತಾ ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬವನ್ನು ಆಚರಣೆ ಮಾಡಿದ್ದು ಕಂಡುಬಂತಿತು. ಶ್ರೀ ಅಮೃತೇಶ್ವರ ದೇವಸ್ಥಾನದ ಬೈಲಿನಲ್ಲಿ ಕಾಮಣ್ಣ ರತಿದೇವಿ ಮೆರವಣಿಗೆಯ ಮಾಡುತ್ತಾ ಚೆನ್ನಮ್ಮ ವೃತ್ತದಲ್ಲಿ ತಂದು ಪೂಜೆ-ಪುನಸ್ಕಾರಗಳನ್ನು ಮಾಡಿ ಕಾಮ ದಹನ ಮಾಡಿದರು. ಈ ವೇಳೆ ಪಟ್ಟಣದ ಗಣ್ಯರು ಪಬ್ಲಿಕ್‌ ನೆಕ್ಸ್ಟ್ ಜೊತೆ ಮಾತನಾಡಿದರು.

Edited By :
Kshetra Samachara

Kshetra Samachara

19/03/2022 04:16 pm

Cinque Terre

32.17 K

Cinque Terre

0

ಸಂಬಂಧಿತ ಸುದ್ದಿ