ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಭಾವೈಕ್ಯತೆ ಸಂಕೇತ ಮೊಹರಂ; ಅದ್ದೂರಿ ಆಚರಣೆಗೆ ಸಾಕ್ಷಿಯಾದ ಬಿಡನಾಳ ಗ್ರಾಮ

ಹುಬ್ಬಳ್ಳಿ: ಮೊಹರಂ ಹಬ್ಬ ಅಂದರೆ ಅದು ಕೇವಲ ಮುಸ್ಲಿಂ ಬಾಂಧವರು ಮಾತ್ರ ಆಚರಣೆ ಮಾಡುವ ಹಬ್ಬವಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಆಚರಣೆ ಮಾಡುವ ಹಬ್ಬವಾಗಿದ್ದು, ಜಾತಿ, ಮತ ಭೇದವನ್ನು ಮರೆತು ಆಚರಣೆ ಮಾಡಲಾಗುತ್ತದೆ.

ಹೌದು. ಹುಬ್ಬಳ್ಳಿಯ ಬಿಡನಾಳ ಗ್ರಾಮದಲ್ಲಿ ಭಾವೈಕ್ಯತೆಯಿಂದ ಮೊಹರಂ ಹಬ್ಬದ ಸವಾರಿ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿತು. ಹೆಜ್ಜೆ ಮೇಳದೊಂದಿಗೆ ಬಿಡನಾಳದಲ್ಲಿ ಮೊಹರಂ ಸವಾರಿ ಕಾರ್ಯಕ್ರಮ ಜರುಗಿದ್ದು, ಗ್ರಾಮದ ಹಿಂದೂ ಮುಸ್ಲಿಂ ಸಮಾಜದವರೆಲ್ಲರೂ ಸೇರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇನ್ನೂ ಯುವಕರು ಹೆಜ್ಜೆ ಹಾಕುವ ಮೂಲಕ ಮೊಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಸಾರುವ ಹಾಡಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಕರ್ಬಲ್ ಕದನದ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಸಾರುವ ಭಾವೈಕ್ಯತೆಯ ಹಬ್ಬಕ್ಕೆ ಹುಬ್ಬಳ್ಳಿಯ ಬಿಡನಾಳ ಗ್ರಾಮ ಸಾಕ್ಷಿಯಾಗಿತು.

Edited By : Somashekar
Kshetra Samachara

Kshetra Samachara

08/08/2022 06:07 pm

Cinque Terre

13.71 K

Cinque Terre

0

ಸಂಬಂಧಿತ ಸುದ್ದಿ