ಹುಬ್ಬಳ್ಳಿ : ಅದು ನಿಜಕ್ಕೂ ತಿಂಗಳ ಪರ್ಯಂತರ ಹೋರಾಟ. ಈ ಹೋರಾಟಕ್ಕೆ ಅದೆಷ್ಟೋ ಜನರು ತಮ್ಮ ಮನೆ ಕೆಲಸ ಕಾರ್ಯವನ್ನು ಬಿಟ್ಟು ನಿಂತಿದ್ದರು. ಕೊನೆಗೂ ಆ ಹೋರಾಟಕ್ಕೆ ಜಯಸಿಕ್ಕಿದೆ. ಹೋರಾಟಕ್ಕೆ ಸಿಕ್ಕ ಜಯದ ಝಲಕ್ ಇಲ್ಲಿದೆ ನೋಡಿ.
ಹೀಗೆ ಈದ್ಗಾ ಮೈದಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮ. ಹಿಂದೂಪರ ಸಂಘಟನೆಗಳ ಹರ್ಷೋದ್ಘಾರ. ರಸ್ತೆ ಉದ್ದಕ್ಕೂ ನೆರೆದ ಜನಸಾಗರ ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ವಾಣಿಜ್ಯನಗರಿ.
ಹೌದು ! ವಿವಾದಿತ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಒಂದಿಲ್ಲೊಂದು ರೀತಿಯಲ್ಲಿ ಹೋರಾಟ, ಪ್ರತಿಭಟನೆ, ಮನವಿ ನೀಡುವ ಮೂಲಕ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಾಕಷ್ಟು ಸಂಘಟನೆಗಳು ಈಗ ಹರ್ಷದ ಹೊಳೆಯಲ್ಲಿ ತೇಲಾಡುತ್ತಿದ್ದಾರೆ.
ಸುಮಾರು ದಿನಗಳಿಂದ ಈದ್ಗಾದಲ್ಲಿ ಗಣೇಶೋತ್ಸವ ಆಚರಣೆ ಮಾಡಲು ಶತಾಯು ಗತಾಯು ಹೋರಾಟ ನಡೆಸಿದ್ದರ ಫಲವಾಗಿ ಮಹಾನಗರ ಪಾಲಿಕೆ ಅನುಮತಿ ನೀಡಿದ ಬೆನ್ನಲ್ಲೇ ಮೂರು ದಿನಗಳ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಮೂಸಿಕ ವಾಹನನಿಗೆ ವಿಜೃಂಭಣೆಯಿಂದ ವಿದಾಯ ಇಂದು ಹೇಳಲಾಗುತ್ತಿದೆ.
ಇನ್ನೂ ಕೇಂದ್ರ ಹಾಗೂ ರಾಜ್ಯ ಸಚಿವರು ಸಾಕಷ್ಟು ಬೆಂಬಲ ನೀಡಿದ ಫಲವಾಗಿ ಬಹುದಿನಗಳ ಕನಸು ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವದ ಕನಸು ಈಡೇರಿದ್ದು, ಜನರ ಸಂತೋಷ ಮುಗಿಲು ಮುಟ್ಟಿದೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದ ವಿವಾದಕ್ಕೆ ಕಾನೂನಾತ್ಮಕ ಅಂತ್ಯ ದೊರೆತ ಬೆನ್ನಲ್ಲೇ ಅವಳಿನಗರದ ಜನರು ಸಂಭ್ರಮಿಸಿ ಹೋರಾಟದ ಜಯವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಈದ್ಗಾದಲ್ಲಿ ಗಣೇಶೋತ್ಸವ ಆಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಾಕಷ್ಟು ಪರ ವಿರೋಧದ ನಡುವೆ ಸುವ್ಯವಸ್ಥಿತವಾಗಿ ಗಣೇಶ ಉತ್ಸವ ಪೂರ್ಣಗೊಂಡಿದ್ದು ಕೆಲವೊಂದು ನಿಯಮ
ಉಲ್ಲಂಘನೆಯಾದರೂ ಉಲ್ಲಾಸದಾಯಕವಾಗಿಯೇ ಉತ್ಸವ ಸಂಪನ್ನವಾಗಿದೆ.
Kshetra Samachara
02/09/2022 02:46 pm