ಹುಬ್ಬಳ್ಳಿ: ಕನ್ನಡ ಸಿನಿಮಾ ರಂಗದಲ್ಲಿಯೇ ಹೊಸ ಸದ್ದನ್ನು ಮಾಡಲು ಶುಭಮಂಗಳ ಸಿನಿಮಾ ಸಿದ್ಧವಾಗಿದ್ದು, ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಹೌದು..ಸಂತೋಷ ಗೋಪಾಲ ನಿರ್ದೇಶನದ ಶುಭಮಂಗಳ ಸಿನಿಮಾ ಕೌಟುಂಬಿಕ ಹಾಗೂ ಮನರಂಜನೆ ಚಿತ್ರವಾಗಿ ನಿರ್ಮಾಣಗೊಂಡಿದೆ. ಒಂದು ಮದುವೆಯ ಬಗ್ಗೆ ಐದು ರೀತಿಯ ಕಥಾಹಂದಿರದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಗತಿಸಿದ ಸುಂದರ ದಿನಗಳನ್ನು ಮೆಲುಕು ಹಾಕುತ್ತಾ ಮುಂದೊಂದು ದಿನ ನೆನಪಿಸಿಕೊಂಡು ಪುಳಕಗೊಳ್ಳುವ ರೀತಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
ಈಗಾಗಲೇ ಪ್ರೀಮಿಯರ್ ಶೋ ಮೂಲಕ ಸಾಕಷ್ಟು ಸದ್ದನ್ನು ಮಾಡಿರುವ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇನ್ನೂ ಹಿತಾ ಚಂದ್ರಶೇಖರ, ಮೇಘನಾ ಗಾಂವಕರ, ರಾಕೇಶ ಮಯ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಳೆ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡುವಂತೆ ಚಿತ್ರ ತಂಡ ಮನವಿ ಮಾಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 10:12 pm