ಧಾರವಾಡ: ಸಾವಿತ್ರಿಬಾಯಿ ಪುಲೆ ಚಲನಚಿತ್ರ ಕಾರಣಾಂತರಗಳಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರಲಿಲ್ಲ. ಈಗ ಶಿಕ್ಷಕಿಯರು ಮುಂದೆ ಬಂದು ಸಿನಿಮಾ ನೋಡಬೇಕು ಎಂದಿದ್ದಕ್ಕೆ ಪುನರ್ ಪ್ರದರ್ಶನ ಮಾಡುತ್ತಿದ್ದೇವೆ ಎಂದು ನಟಿ ತಾರಾ ಅನುರಾಧಾ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಜುಲೈ 31ಕ್ಕೆ ಈ ಚಿತ್ರ ಮತ್ತೆ ರಿ ರಿಲೀಸ್ ಆಗಲಿದೆ. ಈ ಸಿನಿಮಾಕ್ಕೆ ವಿನಾಯ್ತಿ ನೀಡಬೇಕು ಎಂದು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಮಹಿಳಾ ಶಿಕ್ಷಕಿಯರು ಇದ್ದಾರೆ. ಈ ಚಿತ್ರ ಪ್ರತಿಯೊಬ್ಬ ಶಿಕ್ಷಕಿಯರಿಗೂ ತಲುಪಬೇಕು. ಒಳ್ಳೆಯ ಚಿತ್ರಕ್ಕೆ ನಾಡಿನ ಜನತೆ ಸಹಕಾರ ಕೊಟ್ಟಿದ್ದಾರೆ. ಸಾವಿತ್ರಿಬಾಯಿ ಪುಲೆ ಚಿತ್ರಕ್ಕೂ ಸಹಕಾರ ನೀಡುತ್ತಾರೆ. ಶಿಕ್ಷಣ ಸಚಿವರು, ಸಚಿವರಾದ ಆನಂದಸಿಂಗ್ ಸೇರಿದಂತೆ ಅನೇಕರು ನಮ್ಮ ಕೈಜೋಡಿಸಿದ್ದಾರೆ. ಚಿತ್ರಮಂದಿರಗಳನ್ನು ಕೊಡಿಸಿದ್ದಾರೆ. ಹೀಗಾಗಿ ಈ ಚಿತ್ರಕ್ಕೆ ವಿನಾಯ್ತಿ ನೀಡಬೇಕು ಎಂದು ಅವರಿಗೆ ಕೇಳುತ್ತೇವೆ ಎಂದರು.
Kshetra Samachara
08/07/2022 03:04 pm