ಹುಬ್ಬಳ್ಳಿ: ಸಿನಿ ಪ್ರೇಮಿಗಳಿಗೆ ನಾಳೆ ದೊಡ್ಡ ಹಬ್ಬ. ಕನ್ನಡದ ದೊಡ್ಡ ಹೀರೋಗಳ ಕಮರ್ಷಿಯಲ್ ಸಿನಿಮಾಗಳು ರಿಲೀಸ್ ಆಗುತ್ತಿರೋದು ವಿಶೇಷ. ಲಾಕ್ ಡೌನ್ ನಿಂದ ಬಂದ್ ಆಗಿದ್ದ ಥಿಯೇಟರ್ ಗಳು ಈ ಸ್ಟಾರ್ ಗಳ ಸಿನಿಮಾವನ್ನ ವೆಲ್ ಕಮ್ ಮಾಡೋಕೆ ಸಜ್ಜಾಗಿವೆ. ಹುಬ್ಬಳ್ಳಿಯ ಅತಿ ಹಳೆ ಸುಜಾತಾ ಥಿಯೇಟರ್ ಕೂಡ ಈಗ ರೆಡಿಯಾಗಿದೆ. ಈ ಥಿಯೇಟರ್ ಅಲ್ಲಿ ಯಾವ್ ಚಿತ್ರ ಬರ್ತರಿದೆ. ಹೇಗೆಲ್ಲ ಸಿದ್ಧತೆ ಆಗಿದೆ. ಎಲ್ಲವನ್ನೂ ಹೇಳ್ತೀವಿ ಬನ್ನಿ.
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರವನ್ನ ಸ್ವಾಗತಿಸಲು ರಾಜ್ಯದ ಥಿಯೇಟರ್ ಗಳು ರೆಡಿ ಆಗಿವೆ.ನಾಳೆ ಅಕ್ಟೋಬರ್-14 ರಂದು ರಾಜ್ಯದ ಎಲ್ಲೆಡೆ ಚಿತ್ರ ರಿಲೀಸ್ ಆಗುತ್ತಿದೆ. ಹುಬ್ಬಳ್ಳಿಯ ಸುಜಾತಾ ಥಿಯೇಟರ್ ಕೂಡ ಸರ್ವ ಸಿದ್ಧತೆ ಮಾಡಿಕೊಂಡಿದೆ. ಇಡೀ ಥೀಯಟರ್ ಕ್ಲೀನ್ ಅಂಡ್ ಕ್ಲಿಯರ್ ಆಗಿದೆ.ಸ್ಯಾನಿಟೈಸರ್ ಕೂಡ ಆಗಿದೆ.
ಸುಜಾತಾ ಥಿಯೇಟರ್ ಮಾಲೀಕರಾದ ಶ್ರೇಯಸ್ ಸೂಜಿ ಕೂಡ ಸುದೀಪ್ ಗಾಗಿಯೇ ಈ ಚಿತ್ರವನ್ನ ತಮ್ಮ ಥಿಯೇಟರ್ ಅಲ್ಲಿಯೇ ರಿಲೀಸ್ ಮಾಡುತ್ತಿದ್ದಾರೆ. ಸುದೀಪ್ ಸಿನಿಮಾ ಅಂದ್ಮೇಲೆ ಜನ ಸಾಗರವೇ ಹರೆದು ಬರಲಿದೆ ಅನ್ನೋ ಅತಿ ದೊಡ್ಡ ಹೋಪ್ ಅಲ್ಲಿಯೇ ಇದ್ದಾರೆ. ತಮ್ಮ ಥಿಯೆಟರ್ ಅನ್ನೂ ಅಷ್ಟೇ ರೆಡಿ ಮಾಡಿದ್ದಾರೆ. ಇಲ್ಲಿ ಬರೋ ಪ್ರಕ್ಷೇಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದಾರೆ.ಆಸನಗಳನ್ನೂ ನವೀಕರಿಸಿದ್ದಾರೆ. ಒಟ್ಟಾರೆ, ಸುಜಾತಾ ಥಿಯೇಟರ್ ರೆಡಿ ಫಾರ್ ಕಿಚ್ಚನ ಸುದೀಪ್.
ಹುಬ್ಬಳ್ಳಿಯಿಂದ ಕ್ಯಾಮರಾಪರ್ಸನ್
ಇಷ್ಟಲಿಂಗ ಜೊತೆಗೆ
-ರೇವನ್ ಪಿ.ಜೇವೂರ್
PublicNext
Kshetra Samachara
13/10/2021 08:12 pm