ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನಿಲ್ಲವಾಗಿದ್ದರೂ ಅವರು ಮಾಡಿದ ಸಮಾಜಮುಖಿ ಕಾರ್ಯಗಳ ಮೂಲಕ ಅವರು ಸದಾ ಜೀವಂತವಾಗಿದ್ದಾರೆ. ಅವರ ಅಭಿಮಾನಿಗಳ ಮನದಲ್ಲಿ ಅಪ್ಪು ಮನೆ ಮಾಡಿ ನೆಲೆಸಿದ್ದಾರೆ.
ಹೀಗಾಗಿಯೇ ಅಪ್ಪು ಅಭಿಮಾನಿಗಳು ಇಂದಿಗೂ ಅವರ ಮೇಲಿನ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಮೆರೆಯುತ್ತಲೇ ಇದ್ದಾರೆ.
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಅಪ್ಪು ಅಭಿಮಾನಿಯೊಬ್ಬ ಜಗ್ಗಲಿಗೆ ಮೇಲೆ ಹತ್ತಿ ನಿಂತು ಅಪ್ಪು ಬಾವಚಿತ್ರವನ್ನು ತೋರಿಸುವ ಮೂಲಕ ಅವರ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾನೆ. ಇನ್ನು ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನೆರವೇರಿತು. ಹೆಣ್ಣು ಮಕ್ಕಳು ಕೋಲಾಟ ಆಡಿ ಸಂಭ್ರಮಿಸಿದರು. ಸಂಜೆ ಹೊತ್ತಿಗೆ ಎಳೆಯಲ್ಪಟ್ಟ ತೇರಿಗೆ ಭಕ್ತರು ನಮನ ಸಲ್ಲಿಸಿದರು.
Kshetra Samachara
25/04/2022 10:21 pm