ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾಳೆ ಕ್ಲಾಸಿಕ್ ಸಂಸ್ಥೆಯಲ್ಲಿ ಪೋಲಿಸ್ ಹಾಗೂ ಅಗ್ನಿವೀರ ನೇಮಕಾತಿ ಪರೀಕ್ಷೆಗೆ ಉಚಿತ ಕಾರ್ಯಾಗಾರ

ಧಾರವಾಡ: ಶಿಕ್ಷಣಕಾಶಿ ಧಾರವಾಡದ ಕ್ಲಾಸಿಕ್ ಕೆ,ಎ,ಎಸ್ ಮತ್ತು ಐ.ಎ.ಎಸ್ ಸ್ಟಡಿ ಸರ್ಕಲ್ ಧಾರವಾಡ ಸಂಸ್ಥೆಯಲ್ಲಿ ಪೋಲಿಸ್ ಪೇದೆ ಮತ್ತು ಅಗ್ನಿವೀರ ನೇಮಕಾತಿ ಪರೀಕ್ಷೆಗೆ ಉಚಿತ ಕಾರ್ಯಾಗಾರವನ್ನು ನಾಳೆ ಬೆಳಿಗ್ಗೆ 10 ಗಂಟೆಗೆ ಸಪ್ತಾಪೂರ ಬಾವಿ ಹತ್ತಿರದ ಕ್ಲಾಸಿಕ್ ಸಂಸ್ಥೆಯ ಯುನಿಟ್-ಎ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಾಗಾರದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಾಧಕರು ವಿಷಯ ಬೋಧನೆ ಮಾಡಲಿದ್ದಾರೆ. ಅತ್ಯಂತ ಉಪಯುಕ್ತವಾಗಿರುವ ಈ ಶಿಬಿರದ ಪ್ರಯೋಜನವನ್ನು ಪರೀಕ್ಷಾರ್ಥಿಗಳು ಪಡೆದುಕೊಳ್ಳಬೇಕೆಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಲಕ್ಷ್ಮಣ ಎಸ್. ಉಪ್ಪಾರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸುವವರು ಹೆಸರನ್ನು ಸಂಸ್ಥೆಯ ಕಚೇರಿಯಲ್ಲಿ ನೋಂದಾಯಿಸಬೇಕು. ಸಂಪರ್ಕಕ್ಕಾಗಿ : 9980552080

Edited By : Nagaraj Tulugeri
Kshetra Samachara

Kshetra Samachara

17/09/2022 09:41 pm

Cinque Terre

24.91 K

Cinque Terre

0

ಸಂಬಂಧಿತ ಸುದ್ದಿ