ಹುಬ್ಬಳ್ಳಿ : ಶಿಸ್ತು, ಸಂಯಮ ಹಾಗೂ ಇತರರಿಗೆ ಮಾದರಿಯಾಗಬೇಕಿದ್ದ ಸರ್ಕಾರಿ ಪ್ರೌಢಶಾಲೆಯ ಹೆಡ್ ಮಾಸ್ಟರ್ ಹಾಗೂ ದೈಹಿಕ ಶಿಕ್ಷಕ ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳ ಎದುರೇ ಪರಸ್ಪರ ಚಪ್ಪಲಿಯಿಂದ ಬಡಿದಾಡಿಕೊಂಡ ವಿಲಕ್ಷಣ ಘಟನೆ ಹುಬ್ಬಳ್ಳಿಯ ನೇಕಾರನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಶಿಕ್ಷಣ ಇಲಾಖೆ ಆಯುಕ್ತರು ಎಲ್ಲ ಸರ್ಕಾರಿ ಶಾಲಾ ಶಿಕ್ಷಕರು ನಿಗದಿತ ಸಮಯಕ್ಕೆ 15 ನಿಮಿಷ ಮುಂಚೆಯೇ ಶಾಲೆಯಲ್ಲಿ ಹಾಜರಿರಬೇಕು ಎಂಬ ಆದೇಶ ಹೊರಡಿಸಿದ್ದರನ್ವಯ ಈ ಶಾಲೆಯ ಹೆಡ್ ಮಾಸ್ಟರ್ ಶಿವಪ್ಪ ವಿಭೂತಿ ಆ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ಮುಂದಾಗಿದ್ದೇ ಇಷ್ಟೇಲ್ಲ ಅವಾಂತರಕ್ಕೆ ಕಾರಣವಾಗಿದೆ.
ತಡವಾಗಿ ಶಾಲೆಗೆ ಬಂದ ದೈಹಿಕ ಶಿಕ್ಷಕ ಶಂಕರ ದೊಡ್ಡವಾಡ ಅವರಿಗೆ ಆದೇಶದನ್ವಯ ಸರಿಯಾದ ಸಮಯಕ್ಕೆ ಶಾಲೆಗೆ ಆಗಮಿಸುವಂತೆ ಹೆಡ್ಮಾಸ್ಟರ್ ಶಿವಪ್ಪ ವಿಭೂತಿ ಹೇಳುತ್ತಿದ್ದಂತೆ ಕೆಂಡಾಮಂಡಲವಾದ ದೈಹಿಕ ಶಿಕ್ಷಕ ದೊಡ್ಡಮನಿ,ಮೊದಲು ಹೆಡ್ಮಾಸ್ಟರ್ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವದನ್ನು ಕಲಿಯಲಿ ನಂತರ ನಮಗೆ ಬುದ್ದಿ ಹೇಳಲಿ ಎಂದು ಅವಾಚ್ಯ ಶಬ್ದಗಳಿಂದ ಹೆಡ್ ಮಾಸ್ಟರ್ ಶಿವಪ್ಪ ವಿಭೂತಿ ಅವರ ಜೊತೆ ಜಗಳಕ್ಕಿಳಿದು ನಂತರ ಇಬ್ಬರೂ ಚಪ್ಪಲಿಯಿಂದ ಪರಸ್ಪರರ ಹೊಡೆದಾಡಿಕೊಂಡಿದ್ದಾರೆ.
ಮಾಹಿತಿ ಪಡೆದ ಬಿಇಒ ಹಾಗೂ ಡಿಡಿಪಿಐ ಹಲ್ಲೆ ಮಾಡಿದ ಇಬ್ಬರೂ ಶಿಕ್ಷಕರಿಗೆ ಬುದ್ದಿವಾದ ಹೇಳಿ ನೊಟೀಸ್ ಮೂಲಕ ತಪ್ಪು ತಿದ್ದಿಕೊಳ್ಳುವ ಎಚ್ಚರಿಕೆ ನೀಡಿದ್ದು , ಮತ್ತೆ ಇಂತಹ ಘಟನೆ ಪುನರಾವರ್ತನೆಯಾದ್ರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 11:05 am