ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್ ಪಾಟೀಲ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾರ್ಥನಾ ಎಜುಕೇಶನ್ ಸೊಸೈಟಿ ಸಹಭಾಗಿತ್ವದಲ್ಲಿ ನಡೆಯತ್ತಿರುವ ವಿಜ್ಞಾನ ವಿಭಾಗದಲ್ಲಿ 2022ರ ನೀಟ್ ಪರೀಕ್ಷೆಯಲ್ಲಿ 720ಕ್ಕೆ 670 ಅಂಕ ಪಡೆದ ವಿದ್ಯಾರ್ಥಿನಿ ಕುಮಾರಿ ಅನನ್ಯ ಕರ್ಪುರ ಮತ್ತು ಆಕೆಯ ಪಾಲಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ ಪಾಟೀಲ ಆಗಮಿಸಿದ್ದರು. ಅನನ್ಯಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಪಾಲಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ವಿ, ಕೆ ರಡ್ದೆರ ಮಾತನಾಡುತ್ತ ಅನನ್ಯ ಮುಂದಿನ ವಿದ್ಯಾರ್ಥಿಗಳಿಗೆ ಸೂಕ್ತ ದಾರಿ ಹಾಕಿಕೊಟ್ಟಿದಾಳೆ ಆ ದಾರಿಯಲ್ಲಿ ತಾವೆಲ್ಲ ಸಾಗಿ ಎಂದರು, ನಂತರ ಮಾತನಾಡಿದ ಸ್ಥಾನಿಕ ಆಡಳಿತ ಮಂಡಳಿಯ ನಿರ್ದೇಶಕ ಶ್ರೀ ವಾಯ್, ಕೆ ಪಾಟೀಲ ವಿದ್ಯೆ ಕೇವಲ ಒಬ್ಬರ ಸ್ವತ್ತಲ್ಲ ಕಷ್ಟ ಪಟ್ಟು ಓದಿದರೆ ನೀವೆಲ್ಲ ಅನನ್ಯಳ ಹಾಗೆ ಸಾದಿಸಬಹುದು ಉನ್ನತ ಗುರಿ ತಲುಪಬಹುದು ಎಂದರು, ಜೆ ಎಸ್ ಎಸ್ ಮಹಾವಿದ್ಯಾಲಯದ ಉಪನ್ಯಾಸಕ ಡಾ. ವಿ ಎಸ್ ಭೀಮರೆಡ್ಡಿ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೊಂದಿರಬೇಕು ಗುರುವಿನ ಮಾರ್ಗದರ್ಶನ ಮುಖ್ಯ ಅದರಿಂದ ಪಾಲಕರ ಕನಸು ನನಸು ಮಾಡಲು ಸಾಧ್ಯ ಎಂದರು, ನಂತರ ಮಾತನಾಡಿದ ಡಾ. ಆರ್ ಎಮ್ ಪತ್ತಾರ ಅನನ್ಯ ಕೇವಲ ಅಂಕ ಗಳಿಸಲಿಲ್ಲ ಅವಳು ತನ್ನ ಸುತ್ತಲಿನ ಜನರ ಪ್ರೀತಿ ವಿಶ್ವಾಸ ಗಳಿಸಿ ನಮ್ಮೆಲ್ಲರ ಮನೆಮಗಳಾಗಿದ್ದಾಳೆ ಎಂದರು.
ನೆಹರು ಕಾಲೇಜಿನ ಉಪನ್ಯಾಸಕ ಡಾ, ಮಹಾಂತೇಶ್ ಯತ್ನಟ್ಟಿ ವಿದ್ಯಾರ್ಥಿಗಳ ಸಾಧನೆಯಲ್ಲಿ ಉಪನ್ಯಾಸಕರ ಮತ್ತು ಪಾಲಕರ ಶ್ರಮ ಬಹಳ ಮುಖ್ಯ ಅಷ್ಟೇ ಅಲ್ಲದೆ ಕೆ.ಎಚ್ ಪಾಟೀಲ ಮಹಾವಿದ್ಯಾಲದ ವಾತಾವರಣವು ಆಕೆಯ ಸಾಧನೆಗೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅಥಿತಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ವಿಭಾಗದ ಸಹಸಂಯೋಜಕ ಡಾ. ಶಿವರಾಮ್ ಪಾಟೀಲ, ಅನನ್ಯ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ಒಬ್ಬಳು ಅವಳು ನಮ್ಮ ಮಹಾವಿದ್ಯಾಲಯದ ಹೆಮ್ಮೆ ಆಕೆ ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಳು. ಆಕೆ ಆದರ್ಶ ವಿದ್ಯಾರ್ಥಿನಿ ಆಗಿದ್ದಳು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಬಿ ಸಣಗೌಡ್ರ ತಮ್ಮ ಅದ್ಯಕ್ಷಿಯ ಭಾಷಣದಲ್ಲಿ, ಅನನ್ಯ ತನ್ನ ಹೆಸರಿಗೆ ತಕ್ಕಂತೆ ಅನನ್ಯವಾದ ಸಾಧನೆ ಮಾಡಿದ್ದಾಳೆ. ಆಕೆ ತನ್ನ ಪಾಲಕರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದ್ದಾಳೆ ಎಂದರು.
ಸಂಘದ ಹಿತೈಸಿ ಎಚ್.ಎಚ್ ಕಿರೆಸೂರ್, ಕಾಲೇಜು ನಿರ್ದೇಶಕರು ಕೃಷ್ಣರೆಡ್ಡಿ ಲಕ್ಕಣ್ಣವರ, ಭೋದಕ ಬೋದಕೇತರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ರೂಪಾ ಭಾವಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಶಂಕರ ಕುಂಬಾರ ವಂದಿಸಿದರು.
Kshetra Samachara
12/09/2022 03:54 pm