ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

NEET ದಲ್ಲಿ ಹುಬ್ಬಳ್ಳಿ ಸನಾ ಶಾಹೀನ್ ಕಾಲೇಜು ವಿದ್ಯಾರ್ಥಿಗಳ ಶಾನ್ದಾರ್ ಸಾಧನೆ

ಹುಬ್ಬಳ್ಳಿ: ಅದೇಷ್ಟೋ ವಿದ್ಯಾರ್ಥಿಗಳು ಕನಸು ಹೊತ್ತು ಕಾಲೇಜು ಬರುವುದು ಸಾಮಾನ್ಯ. ಆದರೆ ಆ ಎಲ್ಲ ಕನಸು ನನಸಾಗುವುದು ವಿರಳ, ಅಂತರದಲ್ಲಿ ಇಲ್ಲೊಂದು ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಕನಸು ನನಸು ಮಾಡಿತ್ತಿದೆ. ಅಷ್ಟಕ್ಕೂ ಆ ಕಾಲೇಜು ಹೇಗಿದೆ ಅಲ್ಲಿನ ವ್ಯವಸ್ಥೆ ಹಾಗೂ ಶಿಕ್ಷಣ ಕುರಿತು ಚಿಕ್ಕ ವಿವರಣೆ ಇಲ್ಲಿದೆ ನೋಡಿ....

ಎಸ್........ ಹಿಗೇ ಒಂದು ಕಡೆ ವಿಧ್ಯಾರ್ಥಿಗಳಿಗೆ ಶುಭಾಶಯ ಕೋರುತ್ತಿರುವ ಕಾಲೇಜು ಆಡಳಿತ ಮಂಡಳಿ. ಇನ್ನೊಂದು ಕಡೆ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಉತ್ಸಾಹ, ಇಂತಹ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿ ಬೈರಿದೇವರಕೊಪ್ಪದಲ್ಲಿರುವ ಸನಾ ಶಾಹಿನ್ ಎಜ್ಯುಕೇಶನಲ್ ಚಾರಿಟಬಲ್ ಟ್ರಸ್ಟ್ ಕಾಲೇಜನಲ್ಲಿ, 2022 ರಲ್ಲಿ ನಡೆದ Neet ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಧಾರವಾಡ ಜಿಲ್ಲೆಗೆ ಟಾಪ್ ಟೆನ್ ನಲ್ಲಿ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಆಯಿಸಾ ಸಿದ್ದಿಕ್ 574 ಅಂಕಗಳು, ಮೊಹಮ್ಮದ್ ತಾರಾ 541 ಅಂಕಗಳು, ಮದಿಹಾ‌ ವುಮ್ಮುರಷ್ 524 ಅಂಕಗಳು, ಹಿಪ್ಜಾ ಬಿಲ್ಲೆಪಸಾರ್ 512 ಅಂಕಗಳನ್ನು ಪಡೆದು ಕಾಲೇಜಿಗೆ ಟಾಪ್ 4 ಆಗಿದ್ದಾರೆ. ಅಷ್ಟೇ ಅಲ್ಲದೆ ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಅತಿಕಾ‌ಖಾನ್, ಬಸವ ನರಗೆಲ್, ಮಹಮ್ಮದ್ ನಜೀರ್, ಅಬ್ಬಾಸ್ ಖಾನ್ ಪಠಾಣ್, ಜಮೀರ್ ಕಾಗೆನೆಲ್ಲಿ, ರಿಜ್ವಾನ್ ಬೇಗ್, ಆತೀರ್ ಶೇಕ್ ಇವರೂ ಕೂಡ Neet ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಕಾಲೇಜು ಹೆಸರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ.

ಇನ್ನೂ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಕೊಠಡಿ, ಉತ್ತಮ ಶಿಕ್ಷಣ, ಉತ್ತಮ ಸೈನ್ಸ್ ಲ್ಯಾಬ್, ಕಂಪ್ಯೂಟರ್ ಲ್ಯಾಬ್, ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ವಿದ್ಯಾರ್ಥಿಗಳ ಏಳಿಗಾಗಿ ಶ್ರಮಿಸುತ್ತಿದೆ. ಸನಾ ಎಜ್ಯುಕೇಶನಲ್ ಚಾರಿಟಬಲ್ ಟ್ರಸ್ಟ್ ನಲ್ಲಿ, ಸನಾ ಸಾಹಿನ್ ಇಂಡಿಪೆಂಡೆಂಟ್ ಪಿಯು ಸೈನ್ಸ್, ಕಲಾ ವಾಣಿಜ್ಯ ವಿಜ್ಞಾನ, ಪ್ಯಾರಾ ಮೆಡಿಕಲ್, ಬಿಎಡ್, ನರ್ಸಿಂಗ್ ಜಿಎನ್ಎಮ್, ಸನಾ ಪಬ್ಲಿಕ್ ಸ್ಕೂಲ್ ಒಂಬತ್ತು ಹತ್ತನೇಯ ತರಗತಿ ಈ ಎಲ್ಲಾ ಕೋರ್ಸುಗಳನ್ನು ಸನಾ ಕಾಲೇಜು ಹೊಂದಿದೆ.

ಇನ್ನು NEET ನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ತಿಳಿಸುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಉನ್ನತಿಗಾಗಿ ಶ್ರಮಿಸುತ್ತಿರುವ ಸನಾ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಆಡಳಿತ ಕಾರ್ಯ ಶ್ಲಾಘನೀಯ. ಇನ್ನು ಈಗಾಗಲೇ ಸನಾ ಕಾಲೇಜಿನಲ್ಲಿ ಸಧ್ಯ NEET ಅಡ್ಮಿಶನ್ ಓಪನ್ ಆಗಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು.....

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/09/2022 06:08 pm

Cinque Terre

138.1 K

Cinque Terre

6

ಸಂಬಂಧಿತ ಸುದ್ದಿ