ಹುಬ್ಬಳ್ಳಿ: ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್ ಪಾಟೀಲ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್ ಕೆ ಪಾಟೀಲ್ ವಹಿಸಿದ್ದರು. ಈ ವೇಳೆ ಮಾತನಾಡಿದ ದೇಶಸೇವೆಯನ್ನು ಕೇವಲ ಸೈನಿಕರಾಗಿ ಮಾಡಬೇಕೆಂದೇನೂ ಇಲ್ಲ. ನೀವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಕಲಿತು ಉತ್ತಮ ನಾಗರೀಕರಾಗಿ. ಇಂದು ಪ್ರತಿಭಾ ಪಲಾಯನವನ್ನು ತಡೆಯುವುದು ಅವಶ್ಯಕವಾಗಿ. ದೇಶದಲ್ಲಿಯೇ ಪ್ರಾಮಾಣಿಕ ಸೇವೆ ಗೈದರೆ ಅದೇ ದೇಶ ಸೇವೆ. ದೇಶಕ್ಕೆ ನಾವು ನೀಡುವ ಬಹುದೊಡ್ಡ ಕೊಡುಗೆ ಎಂದರು.
ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಕುಮಾರ ವೆಂಕಟೇಶ್ ರಡ್ಡೇರ, ನಿಖಿಲ್ ಜೂಜಗಾವ್ ಮತ್ತು ಮಲ್ಲಿಕಾರ್ಜುನ ಸೈನಿಕರ ತ್ಯಾಗಗಳ ಬಗ್ಗೆ ನಿದರ್ಶನ ಸಹಿತ ಮಾತನಾಡಿದರು. ನಂತರ ದೇಶಭಕ್ತಿ ಗೀತೆಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಪ್ರಾಂಶುಪಾಲ ಎಸ್.ಬಿ ಸಣಗೌಡರ ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಹೇಗೆ ಪ್ರತಿಯೊಬ್ಬ ನಾಗರಿಕರು ತಮ್ಮ ದೇಶ ಸೇವೆ ಮಾಡುತ್ತಿದ್ದರು. ಅದರ ಫಲವಾಗಿ ನಮಗೆ ಸ್ವಾತಂತ್ರ ದೊರೆಯಿತು ಎಂದರು. ವಿಜ್ಞಾನ ವಿಭಾಗದ ಸಹ ಸಂಯೋಜಕ ಡಾ. ಶಿವರಾಮ್ ಪಾಟೀಲ, ಶಂಕರ ಕುಂಬಾರ, ಬೋಧಕ ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
28/07/2022 02:03 pm