ಕುಂದಗೋಳ : ಸಂಶಿ ಫಕ್ಕೀರೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ 85%ಕ್ಕೂ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಶತಾಯುಷಿ ಚನ್ನವೀರಪ್ಪ ಅಂಗಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಾನಿಧ್ಯ ವಹಿಸಿದ್ದ ಸಂಶಿ ವಿರಕ್ತಮಠದ ಚನ್ನಬಸವ ದೇವರು ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ ಹಮ್ಮಿಕೊಂಡಿದ್ದು ಸಂತಸ ತಂದಿದೆ. ಇದೇ ಕಾಲಕಾಲಕ್ಕೆ ಜರುಗಲಿ ಎಂದು ಆಶೀರ್ವಚನ ನೀಡಿದರು.
ಪ್ರಾಸ್ತಾವಿಕವಾಗಿ ಕೆಎಲ್ಇ ಕಾಲೇಜು ಅಧ್ಯಕ್ಷ ಎ. ಬಿ. ಉಪ್ಪಿನ ಮಾತನಾಡಿ ವರ್ಷಕ್ಕೊಂದು ಬಾರಿಯಾದರೂ ಸಮಾಜದ ಜನತೆ ಒಟ್ಟಾಗಲಿ ಎಂಬ ಉದ್ದೇಶದಿಂದ ಪ್ರತಿವರ್ಷ ಈ ಕಾರ್ಯಕ್ರಮ ನಡೆಸುತ್ತಿದ್ದು ಸಮಾಜದ ಸರ್ವ ಬಾಂಧವರು ಸದಾ ಒಗ್ಗಟ್ಟಾಗಿರಿ ಎಂದು ಕರೆ ನೀಡಿದರು.
ರಾಜ್ಯ ಬಣಜಿಗ ಸಮಾಜದ ಮಾಜಿ ಕಾರ್ಯದರ್ಶಿ ಗವಿಸಿದ್ದಪ್ಪ ಕೊಪ್ಪಳ ಉಪನ್ಯಾಸ ನೀಡಿದರು. ತಾಲೂಕಾ ಅಧ್ಯಕ್ಷ ಫಕ್ಕೀರೇಶ ಕೋರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಣಜಿಗ ಬಂಧು ಪತ್ರಿಕೆ ಸಂಪಾದಕ ರುದ್ರಣ್ಣ ಹೊಸಕೇರಿ, ಸವಿತಾ ಅಮರಶಟ್ಟಿ ಸೇರಿದಂತೆ ಅನೇಕರಿದ್ದರು. ಸಹನಾ ಗೋಣಿ ಸಂಗಡಿಗರು ಪ್ರಾರ್ಥಿಸಿದರು.
Kshetra Samachara
25/07/2022 12:34 pm