ಧಾರವಾಡ: ಸ್ಪರ್ಧಾತ್ಮಕ ಜಗತ್ತಿನಲ್ಲಿಯೇ ಹೊಸ ಸಂಚಲನ ಸೃಷ್ಟಿಸಿರುವ ದಿ ಕ್ಲಾಸಿಕ್ ಸ್ಟಡಿ ಸರ್ಕಲ್ ಸಂಸ್ಥೆಯ ಕ್ಲಾಸಿಕ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಧಾರವಾಡದ ವಿದ್ಯಾರ್ಥಿಗಳು ಐಸಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಮಾತ್ರವಲ್ಲದೆ ಶಿಕ್ಷಣಕಾಸಿ ಧಾರವಾಡದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.
ಹೌದು..ಐಸಿಎಸ್ಇ ಪರೀಕ್ಷೇಯಲ್ಲಿ ಕ್ಲಾಸಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮಾಡಿದ್ದಾರೆ. ಕೌನ್ಸಿಲ್ ಪಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮೀನೇಷನ್ ನಡೆಸುವ ಐಸಿಎಸ್ಇ 10 ನೇ ತರಗತಿ ಪರೀಕ್ಷೇಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಅಕ್ಷಯ ಮಾಯಾಚಾರಿ (95.2),ಮಣಿಕಂಠ ಹಂಜಿ(93),ಎಲಿನಾ ಶರ್ಮಾ(89.8),ಹರೀಶ ಕುಲಕರ್ಣಿ (87.8),ವಿಲಾಸ ಚನ್ನನ್ನವರ(86.8) ಅಂಕಗಳನ್ನು ಪಡೆದು ಶಾಲೆ ಕೀರ್ತಿ ತಂದಿದ್ದಾರೆ. ಶಾಲೆಯು ನೂರಕ್ಕೆ ನೂರು ಫಲಿತಾಂಶ ಸಾಧನೆ ಮಾಡಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಸಿಬ್ಬಂಧಿ ವರ್ಗ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.
Kshetra Samachara
20/07/2022 07:44 pm