ಹುಬ್ಬಳ್ಳಿ: ಪ್ರತಿಷ್ಠಿತ ಐ.ಐ.ಟಿ, ಜೆ.ಇ.ಇ ಮುಖ್ಯ ಪರೀಕ್ಷೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ವಿದ್ಯಾನಿಕೇತನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ. ಮಹಾವಿದ್ಯಾಲಯದ 27 ವಿದ್ಯಾರ್ಥಿಗಳು 90 ಕ್ಕೂ ಹೆಚ್ಚು ಶೇಕಡವಾರು ಅಂಕಗಳಿಸಿ ಕೀರ್ತಿ ತಂದಿದ್ದಾರೆ.
ಹೌದು.. ಶ್ರೀಷಾ.ಎಮ್.ಬಂಧ್ಯಾ(99.38), ಅನುಷ ಆರುಣ ಕರಡಿಗುಡ್ಡ(97.97), ಪ್ರೇರಣಾ ಜೈನ್ (97.8), ವಿಸ್ಮಿತಾ ವೈ (97.7), ನಂದನ.ಜಿ.ಹೆಗ್ಗಡೆ( 97,43), ಕೀರ್ತಿ ಕರಾಳೆ (97.35), ಡಿ.ಆರ್.ವಿಕಾಸ(97.2), ಮೋಕ್ಷ ಸಿ.ಪಾಟೀಲ (96.94), ಸುವಿನಾ ಸದಾಶಿವ (95.6), ರುಜುಲಾ.ಆರ್.ಕಾಸ್ನಿಸ್ (95,07), ಸೃಷ್ಟಿ ರಾಜೇಶ್ ಗಾಂವಕರ(94.31), ಸಹನಾ ಬಸಪ್ಪ ಐನಾಪುರ(14.3), ಸಚಿನ ಕಲ್ಲಪ್ಪ ಬಡಿಗೇರ(94), ಕಾರ್ತಿಕ ಜಿ ಹಿರೇಮಠ(93.59), ಅಕ್ಷತಾ ಜೋಶಿ (93.57), ಅಭಿಷೇಕ ಕಿನ್ನಾಳ (93.5), ಅಭಿಷೇಕ ಬೊರಣೆ(92), ಅಪೂರ್ವ ಆಶೋಕ ಪಾಟಿಲ್ (92), ಶ್ರೀಪಾದರಾಜ ಧಂಡಗೂರ(91,93), ಆದಿತ್ಯಸಿಂಗ ರಜಪೂತ(96), ಹರೀಶಗೌಡ ಪಾಟಿಲ್(91), ಶ್ರೀಶೈಲ ಗೊಲಪ್ಪನವರ (91.83), ಕೀರ್ತಿ ಪಾಟೀಲ್ (90.58), ಪ್ರಶಾಂತ.ಬಿ.ದಂಡನ್ನನವರ (90.45), ತನುಜಾ ದೇವರಮನಿ (90.17), ಯುವರಾಜ ಸಿಂಗ್ (90.13), ವಿಪುಲ.ವಿ.ಮುಳಗುಂದ (90) ಶೇಕಡಾ ಅಂಕ ಪಡೆದಿದ್ದಾರೆ.
ಇನ್ನೂ 46 ವಿದ್ಯಾರ್ಥಿಗಳು (80-90) ಶೇಕಡಾವಾರು ಪಡೆದರೆ, 44 ವಿದ್ಯಾರ್ಥಿಗಳು (70-80) ಶೇಕಡಾವಾರು ಅಂಕ ಪಡೆದಿದ್ದಾರೆ. ಒಟ್ಟಾರೆ 117 ವಿದ್ಯಾರ್ಥಿಗಳು 70 ಕ್ಕಿಂತ ಅಧಿಕ ಶೇಕಡಾವಾರು ಅಂಕ ಪಡೆದಿದ್ದಾರೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳ ಈ ಸಾಧನೆಗೆ ಕಾರ್ಯಾಧ್ಯಕ್ಷರಾದ ಶ್ರೀದೇವಿ ಚೌಗಲಾ, ಕಾರ್ಯದರ್ಶಿಗಳಾದ ಅನಿಲಕುಮಾರ ಚೌಗಲಾ, ಪ್ರಾಚಾರ್ಯರಾದ ಡಾ.ಆನಂದ ಮುಳಗುಂದ, ನಿರ್ದೇಶಕರುಗಳಾದ ಗಂಗಾಧರ ಕಮಡೊಳ್ಳಿ, ಡಾ. ರಮೇಶ ಬಂಡಿವಾಡ, ವೀರೆಂದ್ರ ಚೆಡ್ಡಾ ಮತ್ತು ಡಾ. ರವೀಂದ್ರ ಗುರವ, ಹಾಗೂ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
15/07/2022 08:53 pm