ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್.ಪಾಟೀಲ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಎಂ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಡಕ್ಟ್ ಲಾಂಚ್ (ಉತ್ಪನ್ನ ಬಿಡುಗಡೆ) ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಧಾರವಾಡ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ಉಮಾ ಪೂಜಾರ ಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕೆಯ ನಂತರ ವ್ಯವಹಾರಿಕ ಕ್ಷೇತ್ರಕ್ಕೆ ಬಂದಲ್ಲಿ ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅವರಲ್ಲಿ ಆತ್ಮವಿಶ್ವಾಸವನ್ನು ತರುತ್ತವೆ ಎಂದರು.
ವಿದ್ಯಾರ್ಥಿಗಳು ಎರಡು ಗುಂಪುಗಳಾಗಿ ತಾವು ಖುದ್ದಾಗಿ ತಯಾರಿಸಿದ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಅದರ ವಿವರಗಳನ್ನು ಇತರ ವಿದ್ಯಾರ್ಥಿಗಳಿಗೆ ಮತ್ತು ವೀಕ್ಷಕರಿಗೆ ವಿವರಿಸಿದರು.
ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿದ ಜಸ್ಟ್ ಬ್ಲಾಕ್, ಟೀಮಿನ ಹೇರ್ ಆಯಿಲ್'ಗೆ ಪ್ರಥಮಸ್ಥಾನ ಮತ್ತು ಹೈಟೆಕ್ ಹೆರ್ಬಲ್ ಟೀಮಿನ ಟೊಮೇಟೊ ಮತ್ತು ಇತರ ವಸ್ತು ಬಳಸಿ ತಯಾರಿಸಿದ ಟಿ-ವೈಟ್ ಸಾಬೂನು ದ್ವಿತೀಯ ಸ್ಥಾನ ಪಡೆದವು.
ಕಾಲೇಜಿನ ಪ್ರಾಚಾರ್ಯರಾದ ಎಸ್.ಬಿ.ಸಣ್ಣಗೌಡರ ಫಲಿತಾಂಶ ತಿಳಿಸಿ ವಿದ್ಯರ್ಥಿಗಳನ್ನು ಅಭಿನಂದಿಸಿದರು, ಮುಖ್ಯ ನಿರ್ಣಾಯಕರಾಗಿ ಸಂಘದ ಮುಖ್ಯಸ್ಥರು ಎಚ್.ಎಚ್ ಕಿರೇಸೂರ, ವಿಜ್ಞಾನ ವಿಭಾಗದ ಸಹ ಸಂಯೋಜಕರು ಡಾ. ಶಿವರಾಂ ಪಾಟೀಲ ಮತ್ತು ಭೋದಕ ಭೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
08/07/2022 10:43 pm