ಹುಬ್ಬಳ್ಳಿ: ಸ್ವಾಭಿಮಾನ ಫೌಂಡೇಶನ್ ವತಿಯಿಂದ, ಸಮಾಜದಲ್ಲಿ ಗಮನಾರ್ಹ ಸಾಧನೆಗೈದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು ಇತರ ಯುವ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ ಎಂದು ಸ್ವಾಭಿಮಾನ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಭಿಮಾನ ಫೌಂಡೇಶನ್ ವತಿಯಿಂದ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಸರ್ಕಾರಿ ಶಾಲೆಗಳಲ್ಲಿ ಮತ್ತು ಆರ್ಥಿಕವಾಗಿ ಹಿಂದುವಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವು ಜೂ.25 ರಂದು ಶನಿವಾರ ಸಂಜೆ 5 ಘಂಟೆಗೆ ನಗರದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮಾಜಿಕ ಕಾರ್ಯಕರ್ತ ಡಾ.ಕೆ ಎಸ್ ಶರ್ಮಾ ವಹಿಸುವರು, ಮುಖ್ಯ ಅಧಿತಿಗಳಾಗಿ ಹುಧಾ ಮಹಾನಗರ ಪಾಲಿಕೆಯ ಆಯುಕ್ತ ಗೋಪಾಲಕೃಷ್ಣ ಬಿ ಭಾಗವಹಿಸುವರು ಎಂದರು.
Kshetra Samachara
22/06/2022 12:45 pm