ಹುಬ್ಬಳ್ಳಿ: ನನ್ನ ಮಗಳ ಸಾಧನೆಯಿಂದ ನಿಜಕ್ಕೂ ನನಗೆ ತುಂಬಾ ಖುಷಿಯಾಗಿದೆ. ನಾನು ನಿರೀಕ್ಷೆ ಮಾಡಿದ್ದೇ ನನ್ನ ಮಗಳು ಸಾನಿಕಾ rank ಬರುತ್ತಾಳೆ ಎಂದು ಸಾನಿಕಾ ತಾಯಿ ರಾಜೇಶ್ವರಿ ರವಿಶಂಕರ ಹೇಳಿದರು.
ಸಾನಿಕಾ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾನು ನನ್ನ ಮಗಳಿಗೆ ತಮಾಷೆ ಮಾಡ್ತಿದ್ದೇ... ನೀನು ಯಾವಾಗ ಸಾಧನೆ ಮಾಡ್ತಿಯಾ ಅವತ್ತು ನೀನು ನನ್ನ ಮಗಳು ಎಂದು ಹೇಳುತ್ತಿದ್ದೆ. ಆದರೆ, ನನ್ನ ಮಾತನ್ನು ಮಗಳು ಗಂಭೀರವಾಗಿ ಪರಿಗಣಿಸಿ ಈಗ ಸಾಧನೆ ಮಾಡಿರುವುದು ನಿಜಕ್ಕೂ ನಮಗೆ ಹೆಮ್ಮೆ ತಂದಿದೆ ಎಂದು ಅವರು ಹೇಳಿದರು.
ಅವಿಭಕ್ತ ಕುಟುಂಬದಲ್ಲಿ ಇದ್ದರೂ ಕೂಡ ಅವಳ ಓದಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಸಪೋರ್ಟ್ ಮಾಡಿದ್ದೇವೆ. ಮುಂದಿನ ಸಾಧನೆಗಳಿಗೂ ನಾವು ಸಪೋರ್ಟ್ ಮಾಡುತ್ತೇವೆ ಎಂದು ಅವರು ಮಗಳ ಸಾಧನೆಯ ಖುಷಿಯನ್ನು ಹಂಚಿಕೊಂಡಿದ್ದಾರೆ.
Kshetra Samachara
18/06/2022 04:10 pm