ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಂಪಲ್ಸ್ ಕಾಲೇಜಿನಲ್ಲಿ ಪ್ರತಿಭೆಗಳಿಗೆ ಸುವರ್ಣಾವಕಾಶ: ಎಸ್.ಎಸ್.ಎಲ್.ಸಿ ನಂತರದ ಭವಿಷ್ಯಕ್ಕೆ ಅಡಿಪಾಯ

ಹುಬ್ಬಳ್ಳಿ: ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನಲ್ಲಿರುವ ಅದ್ಬುತ ಪ್ರತಿಭೆ ಅನಾವರಣ ಮಾಡಲು ವೇದಿಕೆ ಅವಶ್ಯಕತೆ ಇದ್ದೇ ಇರುತ್ತದೆ. ಹೀಗೆಯೇ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕನಸನ್ನು ಸಾಕಾರಗೊಳಿಸಲು ಒಂದು ಶಿಕ್ಷಣ ಸಂಸ್ಥೆಯ ಸಹಕಾರ ಹಾಗೂ ಗುರುವಿನ ಶ್ರೀರಕ್ಷೆ ಬೇಕೇ ಬೇಕು. ಇಂತಹ ಅದೆಷ್ಟೋ ಪ್ರತಿಭೆಗಳ ಅನಾವರಣಕ್ಕೆ ಸಿದ್ಧವಾಗಿದೆ ಹುಬ್ಬಳ್ಳಿಯ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು.

ಹೌದು‌... ಎಸ್.ಎಸ್.ಎಲ್.ಸಿ ಶೈಕ್ಷಣಿಕ ಬದುಕಿನ ಪ್ರಮುಖ ಘಟ್ಟ. ಆ ನಂತರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೆಗೆದುಕೊಳ್ಳುವ ಅದೆಷ್ಟೋ ನಿರ್ಧಾರಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ. ಹಾಗಿದ್ದರೇ ಎಸ್.ಎಸ್.ಎಲ್.ಸಿ ನಂತರದಲ್ಲಿ ಏನ ಮಾಡಿದರೇ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಅಂತ ಚಿಂತಿಸುತ್ತಿರುವ ಪಾಲಕರಿಗೆ ಹಾಗೂ ಮಕ್ಕಳಿಗೆ ಹುಬ್ಬಳ್ಳಿಯ ವಿದ್ಯಾನಗರದ ಶಿರೂರ್ ಪಾರ್ಕ್ ನಲ್ಲಿರುವ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಕಲ್ಪಿಸುತ್ತಿದೆ ಒಂದು ಸುವರ್ಣ ಅವಕಾಶ.

ಇನ್ನೂ ಆರ್ಥಿಕ ಸಂಕಷ್ಟ ಅನುಭವಿಸುವ ಪಾಲಕರಿಗೆ, ಕೋವಿಡ್ ಸಂದರ್ಭದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಹಾಗೂ ಪ್ರತಿಭೆಗಳಿದ್ದು, ವೇದಿಕೆಗಾಗಿ ಪರದಾಡುತ್ತಿರುವ ಪ್ರತಿಭಾವಂತ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿಯೇ ಇಂಪಲ್ಸ್ ಪಿಯು ಕಾಲೇಜು ಹಲವಾರು ರೀತಿಯ ಯೋಜನೆ ಜಾರಿಗೊಳಿಸಿದೆ.

ಹಾಗಿದ್ದರೆ ಮತ್ತೇ ಏಕೆ ತಡ ಮಾಡ್ತಿರಾ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಂದೇ ಅಡಿಪಾಯ ಹಾಕಿ. ಇಂಪಲ್ಸ್ ಪಿಯು ಸೈನ್ಸ್ ಕಾಲೇಜಿಗೆ ಭೇಟಿ ನೀಡಿ ನಿಮ್ಮ ಮಕ್ಕಳ ಉಜ್ವಲ ಶೈಕ್ಷಣಿಕ ಬದುಕಿಗೆ ಮುನ್ನುಡಿ ಬರೆಯಿರಿ...

ವಿಳಾಸ

ಇಂಪಲ್ಸ್ ಪಿಯು ಸೈನ್ಸ್ ಕಾಲೇಜು.

ಸೂರ್ಯ ಅವೆನ್ಯೂ, ಅಕ್ಷಯ ಕಾಲೋನಿ

ಶಿರೂರ್ ಪಾರ್ಕ್ ವಿದ್ಯಾನಗರ ಹುಬ್ಬಳ್ಳಿ...

ದೂರವಾಣಿ ಸಂಖ್ಯೆ

7618734756

8904075981

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/05/2022 12:36 pm

Cinque Terre

44.2 K

Cinque Terre

0

ಸಂಬಂಧಿತ ಸುದ್ದಿ