ಕುಂದಗೋಳ : ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ, ಕುಂದಗೋಳ ತಾಲೂಕಿನ ಅಲ್ಲಾಪೂರದ ಕಿರಿಯ ಪ್ರಾಥಮಿಕ ಶಾಲೆಯನ್ನ ಥೇಟ್ ಚಿಗರಿ ಬಸ್ ತರ ಮಾರ್ಪಾಡು ಮಾಡಲಾಗಿದೆ.
ಅಲ್ಲಾಪೂರ ಶಾಲಾ ಮಕ್ಕಳೀಗ ಚಿಗರಿ ಬಸ್ ನಂತಿರುವ ಶಾಲೆಯಲ್ಲಿ ಪ್ರಯಾಣಿಕರಂತೆ ಕುಳಿತು ಪಾಠ ಕೇಳ್ತಿದ್ದಾರೆ. ಇವರಿಗೆ ಸಾರಿಗೆ ಅಧಿಕಾರಿಗಳು ಒಂದಷ್ಟು ಮಾಹಿತಿಯನ್ನೂ ನೀಡಿದ್ರು. ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಿಂದ ಹುಬ್ಬಳ್ಳಿ ಚಿಗರಿ ಬಸ್ ನಿಲ್ದಾಣ, ಬಿಆರ್.ಟಿಎಸ್ ಕುರಿತು ಮಾಹಿತಿ ಚಿತ್ರಣದ ಜೊತೆ ಜೊತೆಗೆ ಪ್ರಾದೇಶಿಕ ಬಸ್ ನಿಲ್ದಾಣದಿಂದ ನವನಗರ ಬಸ್ ನಿಲ್ದಾಣ ಹಾಗೂ ಧಾರವಾಡದ ಟರ್ಮಿನಲ್ ವರೆಗೆ ಚಿಗರಿ ಪ್ರಯಾಣದ ಜೊತೆ ಮಾಹಿತಿ ನೀಡಿದ್ದಾರೆ.
ಇದಲ್ಲದೆ ಧಾರವಾಡದ ಮಿತ್ರ ಸಮಾಜದಿಂದ ಬಿಆರ್.ಟಿಎಸ್ ಕಂಟ್ರೋಲ್ ರೂಂ ಮಾಹಿತಿ ಹಾಗೂ ಬಿಆರ್.ಟಿಎಸ್ ಪ್ರಶ್ನೋತ್ತರಗಳನ್ನು ಮಕ್ಕಳಿಗೆ ತಿಳಿಸಿ ಕೊಡಲಾಯ್ತು. ಜೊತೆಗೆ ಚಿಗರಿ ಬಸ್ ಪ್ರಯಾಣದ ನೆನಪಿನ ಕಾಣಿಕೆ ಸಹ ನೀಡಲಾಯ್ತು. ಅಲ್ಲಾಪೂರ ಕಿರಿಯ ಪ್ರಾಥಮಿಕ ಶಾಲೆಯ 3, 4 ಮತ್ತು 5ನೇ ತರಗತಿ ಮಕ್ಕಳು ಶಿಕ್ಷಕರು ಬಿಆರ್.ಟಿಎಸ್ ಮಾಹಿತಿ ಕಾರ್ಯಾಗಾರ ಆಲಿಸಿ ಪ್ರಯಾಣ ಆನಂದಿಸಿ ಖುಷಿ ಆದ್ರು.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
08/04/2022 05:56 pm