ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬೇಸಿಗೆ ರಜಾ ಕಳೆಯಲು ನಮ್ಮೂರಿನ ಕಡೆ ನಾವು ನಡ್ರಿಲೇ ನಡ್ರಿ

ಕುಂದಗೋಳ : ಹೆಗಲ ಮೇಲೆ ಟ್ರಂಕ್ ಹೊತ್ತು ಬಸ್ಸಿನ ದಾರಿ ಕಾಯುವ ಮಕ್ಕಳು, ಅಬ್ಬಾ ! ಶಾಲೆಗೆ ರಜಾ ಮಸ್ತ್ ಆಟಾ ಆಡೋಣ ನಡ್ರಿಲೇ ಎನ್ನುವ ಸಂತೋಷ, ದಾರಿಯುದ್ದಕ್ಕೂ ನಮ್ಮೂರು ನಮ್ಮ ಮನೆ ಸೆರಬೇಕೆಂಬ ಹಂಬಲ.

ಹೌದು ! ಇಷ್ಟೇಲ್ಲಾ ನೋಟಗಳಿಗೆ ಸಾಕ್ಷಿಯಾದದ್ದು ಮಾತ್ರ ಈ ಬೇಸಿಗೆ ರಜಾ.

ಈಗಾಗಲೇ 8.9ನೇ ತರಗತಿ ಮಕ್ಕಳಿಗೆ ಮೇ.16 ರ ವರೆಗೆ ಬೇಸಿಗೆ ರಜೆ ಸಿಕ್ಕಿದೆ. ಈ ರಜೆಯ ಮಜವನ್ನು ಆನಂದಿಸಲು ಶಿವಾನಂದ ವಸತಿ ಶಾಲೆಯಲ್ಲಿ ಇದ್ದ ಮಕ್ಕಳು ತಮ್ಮೂರಿನ ಕಡೆ ಪ್ರಯಾಣ ಬೆಳೆಸಲು ತಳ್ಳುವ ಗಾಡಿ ಮೂಲಕ ಟ್ರಂಕ್ ಹೇರಿಕೊಂಡ ಬಂದ ಸಡಗರ, ಸಂಭ್ರಮ ಮಾತ್ರ ನಿಜಕ್ಕೂ ಖುಷಿ.

ಇನ್ನೂ ಇಲ್ನೋಡಿ ಬಸ್ ನಿಲ್ದಾಣದಲ್ಲಿ ಈ ತರಹ ತಮ್ಮೂರಿನ ಬಸ್ ದಾರಿ ಕಾಯುತ್ತಾ ಕುಳಿತು ಮಕ್ಕಳು ತಮ್ಮ ರಜೆಯ ಮಜವನ್ನು ಆನಂದಿಸುವ ಬಗೆ ವ್ಯಕ್ತಪಡಿಸಿದ್ದು ಹೀಗೆ.

ಕೇಳಿದ್ರಲ್ಲಾ ಸ್ನೇಹಿತರೇ, ನಾವು ನೀವೂ ನಮ್ಮಂತೆ ಎಲ್ಲರೂ ತಂದೆ ತಾಯಿ ಬಿಟ್ಟು ಹಾಸ್ಟೇಲ್'ನಲ್ಲಿದ್ದು ಶಾಲೆ ಕಲಿತು ಆ ದಿನಗಳು. ರಜೆ ಸಿಕ್ರೆ ಸಾಕು ನಮ್ಮನೆ ಸೇರಬೇಕೆಂಬ ದಿನಗಳು ನಿಜಕ್ಕೂ ಮರೆಯಲಾರವು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/03/2022 12:53 pm

Cinque Terre

64.72 K

Cinque Terre

2

ಸಂಬಂಧಿತ ಸುದ್ದಿ