ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಇಂಗ್ಲಿಷ್ ಎಕ್ಸಿಬಿಷನ್ ಪೂರ್ವ ತಯಾರಿ ವೀಕ್ಷಿಸಿದ ಡಯಟ್ ಹಿರಿಯ ಉಪನ್ಯಾಸಕ

ಅಣ್ಣಿಗೇರಿ: ತಾಲೂಕಿನ ಹಳ್ಳಿಕೇರಿ ಗ್ರಾಮದ ಕೃಷ್ಣ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಿತ್ತಿಚಿತ್ರಗಳ ಪ್ರದರ್ಶನದ ಪೂರ್ವ ತಯಾರಿಯನ್ನು ಡಯಟ್‌ನ ಹಿರಿಯ ಉಪನ್ಯಾಸಕ ಶಿವಾನಂದ ಮಲಾಡ್ ಆಗಮಿಸಿ ವೀಕ್ಷಿಸಿದರು. ಹಾಗೂ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಮತ್ತು ಅವರು ತಯಾರಿಸಿದ ವಿವಿಧ ಉಪಕರಣಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೂ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಪತ್ರಿಕೆಯ ಬಗ್ಗೆ ತರಬೇತಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೇವಲ ವಿಜ್ಞಾನ ವಿಷಯದಲ್ಲಿ ಮಾತ್ರ ವಿದ್ಯಾರ್ಥಿಗಳು ಪ್ರಯೋಗ ಮಾಡುತ್ತಿದ್ದರು. ಈಗ ಇಂಗ್ಲಿಷ್ ವಿಷಯದ ಪ್ರಯೋಗವನ್ನು ಮಾಡಿದ್ದು, ಅತಿ ಸಂತೋಷದ ವಿಷಯವೆಂದು ಮೆಚ್ಚಿಗೆಯನ್ನು ವ್ಯಕ್ತ ವ್ಯಕ್ತಪಡಿಸಿದರು.

ಇದೇ ವೇಳೆ ಕೃಷ್ಣ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕರಾದ ರವಿಕುಮಾರ್ ಬೆಳಹಾರ ಮಾತನಾಡಿ, ಇದೇ ಫೆಬ್ರವರಿ ನಾಲ್ಕರಂದು ಶುಕ್ರವಾರ ನಡೆಯುವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಪಾಲಕರು ಗ್ರಾಮದ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ, ಈ ಪ್ರಯೋಗವನ್ನು ಎಲ್ಲರೂ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಹಾಗೂ ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

Edited By : Shivu K
Kshetra Samachara

Kshetra Samachara

03/02/2022 02:13 pm

Cinque Terre

18.1 K

Cinque Terre

0

ಸಂಬಂಧಿತ ಸುದ್ದಿ