ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತದಾನ ಮಾಡುವುದರ ಮೂಲಕ ದೇಶದ ಅಭಿವೃದ್ಧಿ ಮಾಡಬಹುದು"- ಡಾ. ದ್ಯಾನೇಶ್ವರ ಪಿ. ಚೌರಿ

ಹುಬ್ಬಳ್ಳಿ: ಶ್ರೀ ಜಗದ್ಗುರು ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ದ್ಯಾನೇಶ್ವರ ಪಿ .ಚೌರಿ ಯವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮತದಾನದ ಹಕ್ಕನ್ನು ಯುವ ಜನತೆ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಹಾಗೂ ಕಾನೂನಾತ್ಮಕವಾಗಿ ಉಪಯೋಗಿಸಿಕೊಂಡಿದೆ. ಆದರೆ ಪ್ರಬುದ್ದ ರಾಷ್ಟ್ರದ ನಿರ್ಮಾಣ ಮಾಡಬಹುದು. ಇಂದು ನಾವು ಪಾಶ್ಚಿಮಾತ್ಯ ದೇಶಗಳನ್ನು ಅವಲೋಕಿಸಿ ನೋಡಿದಾಗ ನಮ್ಮ ದೇಶದಲ್ಲಿ ಮತದಾನ ಚಲಾಯಿಸುವ ಶೇಕಡಾವಾರು ಪ್ರಮಾಣ ಬಹಳ ಕಡಿಮೆ ಇದೆ. ಈ ನಿಟ್ಟಿನಲ್ಲಿ ಭಾರತದ ಚುನಾವಣೆ ಆಯೋಗ ಜನೇವರಿ 25 ರ ದಿನವನ್ನು "ಮತದಾನ ದಿನ" ಎಂದು ಘೋಷಿಸಿ ದೇಶದ ತುಂಬೆಲ್ಲಾ ಮತದಾನದ ದಿನಾಚರಣೆ ಆಚರಿಸುವ ಮೂಲಕ ಮತದಾನದ ಅರಿವಿನ ಕುರಿತು ಜಾಗೃತಿ ಮೂಡಿಸುತ್ತಿದೆ. ಹಾಗಾಗಿ ಪ್ರಜಾಪ್ರಭುತ್ವದ ಬೇರು ಘಟ್ಟಿಯಾಗಬೇಕಾದರೆ ಮತದಾನದಲ್ಲಿ ದೇಶದ ಎಲ್ಲ ವಯಸ್ಕ ನಾಗರಿಕರು ಅತೀ ಹೆಚ್ಚಿನ ಪ್ರಮಾಣದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಬಾಗವಹಿಸಬೇಕಾಗಿದೆ. ಹಾಗಾಗಿ ದೇಶದ ಯುವ ಜನತೆ ಹಣಕ್ಕಾಗಿ ತಮ್ಮ ಮತಗಳನ್ನು ಮಾರಿಕೊಳ್ಳದೆ "ಮತದಾನದ ಹಕ್ಕು ನಮ್ಮ ಮತ್ತು ದೇಶದ ಭವಿಷ್ಯ"ಎಂದು ತಿಳಿದು ನಡೆಯಬೇಕೆಂದು ತಿಳಿಸಿದರು.

ಅಲ್ಲದೇ ಗತಕಾಲದಿಂದ ಹೆಣ್ಣಿನ ಮೇಲಾದ ಶೋಷಣೆಯನ್ನು ಹಂತ- ಹಂತವಾಗಿ ಕಾನೂನಾತ್ಮಕವಾಗಿ ಹೇಗೆ ಪರಿಹಾರವನ್ನು ನೀಡಲಾಯಿತು ಮತ್ತು ಮಹಿಳೆಯರ ವಿವಿಧ ಹಕ್ಕುಗಳನ್ನು ಸಂವಿಧಾನ ಬದ್ದವಾಗಿ ಯಾವರೀತಿಯಲ್ಲಿ ಪಡೆದುಕೊಳ್ಳಬೇಕು ಎಂಬುದರ ಕುರಿತು ವಿಸ್ತಾರವಾಗಿ ತಿಳಿಸಿದ ಮತ್ತೋರ್ವ ಕಾನೂನು ಪ್ರಾಧ್ಯಾಪಕರಾದ ಪ್ರೊ. ಸ್ವಪ್ನ ಸೋಮಯಾಜಿ, ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ.ಲಿಂಗರಾಜ ಅಂಗಡಿ ಯವರು ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವು ಕೂಡ ಆಗಿದೆ, ಮತದಾನವನ್ನು ಪ್ರತಿಯೊಬ್ಬರು ಚಲಾಯಿಸುವ ಮೂಲಕ ದೇಶದ ಸಂವಿಧಾನ ಮತ್ತು ಕಾನೂನಿನ ಮೂಲಕ ದೇಶದ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೋಷಣೆಯಾದಾಗ ಕಾನೂನಿನ ಮೂಲಕ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂಬ ಜಾಗೃತಿ ನಮ್ಮಲ್ಲಿರಬೇಕು ಎಂದು ತಿಳಿಸಿದರು. ಕು. ದೀಪಾ ಬಣಕಾರ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶಿವಲೀಲಾ ವೈಜಿನಾಥ ಸ್ವಾಗತಿಸಿದರು. ಕು ವೈಷ್ಣವಿ ಕುಲರ್ಣಿ ಅತಿಥಿ ಪರಿಚಯ ಮಾಡಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ಮಹಾದೇವ ಹರಿಜನ ವಂದಿಸಿದರು. ಮಮತಾ ಜಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ. ಸಿಸೀಲಿಯಾ ಡಿಕ್ರೂಜ್ , ಡಾ. ಜ್ಯೋತಿ ಲಕ್ಷ್ಮಿ ಡಿ. ಪಿ, ಪ್ರೊ. ಶಿವಕುಮಾರ ಬನ್ನಿಹಟ್ಟಿ, ಪ್ರೊ. ಸಿ ಕೆ ಶಶಾಂಕ್, ಪ್ರೊ ಸುಸ್ಮಿತಾ. ಕೆ, ಗಿರೀಶ ಕುಲಕರ್ಣಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

25/01/2022 06:23 pm

Cinque Terre

9.17 K

Cinque Terre

0

ಸಂಬಂಧಿತ ಸುದ್ದಿ