ಅಣ್ಣಿಗೇರಿ; ಪಟ್ಟಣದ ಒಂದನೇ ನಂಬರ್ ಶಾಲೆಯಲ್ಲಿ ಇತ್ತೀಚಿಗಷ್ಟೇ ಎಸ್.ಡಿ.ಎಂ.ಸಿ ಸಮಿತಿ ರಚನೆಯಾಗಿದ್ದು, ಈ ಹಿನ್ನೆಲೆಯಲ್ಲಿ ನೂತನ ಎಸ್.ಡಿ.ಎಂ.ಸಿ ಸದಸ್ಯರಿಗೆ ಸ್ವಾಗತ ಕಾರ್ಯಕ್ರಮವನ್ನು ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಧಾನ ಗುರುಗಳಾದ ಎಂ.ಆರ್.ಕಾಂಟ್ರಾಕ್ಟರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಎಂ.ಎಂ.ದೊಡ್ಡಮನಿ ಶಿಕ್ಷಕರು ಆಗಮಿಸಿದ್ದರು.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಸೇರಿದಂತೆ ಶಾಲೆಯ ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
22/01/2022 01:32 pm