ಹುಬ್ಬಳ್ಳಿ: ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಜೊತೆಗೆ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ಹೊಣೆಯನ್ನು ಹುಬ್ಬಳ್ಳಿಯ ಐಇಎಂಎಸ್ ಬಿ-ಸ್ಕೂಲ್ ಶಿಕ್ಷಣ ಸಂಸ್ಥೆಯು ಹೊತ್ತಿದ್ದು, ಅದೇ ರೀತಿಯಲ್ಲಿ ಕಾರ್ಯವನ್ನು ಕೂಡ ಮಾಡುತ್ತಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪಾಲಕರ ಕನಸನ್ನು ನನಸು ಮಾಡುವ ಮೂಲಕ ಜನಮನ್ನಣೆ ಪಡೆದಿರುವ ಸಂಸ್ಥೆಯಾಗಿದೆ.
ಹೌದು..ಪಾಲಕರಲ್ಲಿಯೂ ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂಬ ಕನಸು ಇದ್ದೆ ಇರುತ್ತದೆ. ಅಲ್ಲದೇ ಪ್ರಸ್ತುತ ದಿನಮಾನಗಳಲ್ಲಿ ಆರ್ಥಿಕ ಹೊರೆಯಿಂದ ಅದೆಷ್ಟೋ ವಿದ್ಯಾರ್ಥಿಗಳು ಶೈಕ್ಷಣಿಕ ಬದುಕನ್ನು ಮೊಟಕುಗೊಳಿಸಿ ಮನೆ ನಿರ್ವಹಣೆ ಜವಾಬ್ದಾರಿ ಹೊರುತ್ತಾರೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರಕವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಐಇಎಂಎಸ್ ಬಿ-ಸ್ಕೂಲ್ ವೇದಿಕೆಯೊಂದನ್ನು ಕಲ್ಪಿಸುತ್ತಿದೆ.
ಎಂಬಿಎ ಶಿಕ್ಷಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುತ್ತಿರುವ ಹುಬ್ಬಳ್ಳಿಯ ಐಇಎಂಎಸ್ ಬಿ-ಸ್ಕೂಲ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ವಿದ್ಯಾಕೇಂದ್ರವಾಗಿ ಹೊರ ಹೊಮ್ಮಿದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ಪ್ರಶಾಂತ ಪರಿಸರದ ನಡುವೆ ಹುಬ್ಬಳ್ಳಿಯ ತಾರಿಹಾಳ ಔದ್ಯೋಗಿಕ ಪ್ರದೇಶದಲ್ಲಿ ತಲೆ ಎತ್ತಿರುವ ಐಇಎಂಎಸ್ ಬಿ-ಸ್ಕೂಲ್ ತನ್ನದೇ ಆದ ಹತ್ತಾರು ವೈಶಿಷ್ಟ್ಯಗಳಿಂದ ಇಂದು ಭಾರತದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ದೊರಕಿಸಿಕೊಡುವುದರ ಜೊತೆಗೆ ಒಬ್ಬ ಸದೃಢ ನಾಗರಿಕನನ್ನಾಗಿಸಬೇಕು ಎಂಬ ಮಾತಿಗೆ ಕಟ್ಟಿಬದ್ದರಾಗಿ 2006 ರಲ್ಲಿ ಹೆಸರಾಂತ ಲೆಕ್ಕಪರಿಶೋಧಕ ಡಾ.ಎನ್.ಎ.ಚರಂತಿಮಠ ಹಾಗೂ ಇನ್ನಿತರ ಉದ್ಯಮಿಗಳಿಂದ ಕೈಝಾನ್ ಎಜ್ಯುಪ್ಲೇಸ್ ಸೊಸೈಟಿಯ ಮೂಲಕ ಆರಂಭಗೊಂಡ ಐಇಎಂಎಸ್ (ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜುಮೆಂಟ್ ಸೈನ್ಸ್) ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕು ಚೆಲ್ಲಿ ಆಂತರ್ಯದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯನ್ನು ತಗ್ಗಿಸಲು ಉಚಿತ ಊಟ-ಉಪಹಾರ, ಸಮವಸ್ತ್ರ ಹಾಗೂ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಖರ್ಚಿನ ಹೊರೆಯಿಂದ ಮುಕ್ತಮಾಡುತ್ತಿದೆ.
ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿರುವ ಈ ವಿದ್ಯಾ ಸಂಸ್ಥೆ ಕಂಪನಿಗಳ ಹಾಗೂ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆ ಹೇಗೆ ಮಾಡಬೇಕೆನ್ನುವ ಮೂಲಭೂತ ಶಿಕ್ಷಣ ನೀಡಿ, ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದೆ. ಇನ್ನೂ ಕಾಲೇಜಿನ ಆಡಳಿತ ಮಂಡಳಿ ಕಾಲಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುತ್ತಿದ್ದಾರೆ. ವಿವಿಧ ಕಂಪನಿಯ ಮುಖ್ಯಸ್ಥರು, ಆಡಳಿತ ಮಂಡಳಿಯ ವ್ಯವಸ್ಥಾಪಕರು ಹಾಗೂ ಉದ್ಯಮಿಗಳಿಂದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಆಡಳಿತ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತಿದೆ.
ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಎನ್.ಎ.ಚರಂತಿಮಠ ಹಾಗೂ ನಿರ್ದೇಶಕ ಡಾ.ವೀರಣ್ಣ ಡಿ.ಕೆ. ಅವರ ಮಾರ್ಗದರ್ಶನದಲ್ಲಿ ಎರಡು ವರ್ಷ (ನಾಲ್ಕುಸೆಮಿಸ್ಟರ್) ಗಳ ಗುಣಮಟ್ಟ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೊಳಿಸಿ ವಯಕ್ತಿಕ ಸಂದರ್ಶನಗಳ ಬಗ್ಗೆ ತರಭೇತಿ ನೀಡಿ ಹೆಚ್ಚು ಕೆಲಸ ಸಿಗುವಂತೆ ಮಾಡಲಾಗುತ್ತಿದೆ.ಅಲ್ಲದೇ 100% ಪ್ಲೆಸ್ ಮೆಂಟ್ ಕಲ್ಪಿಸಿಕೊಡುವ ಜೊತೆಗೆ ಇಲ್ಲಿ ಕಲಿತ ವಿದ್ಯಾರ್ಥಿಗಳು 10,00,000 ವಾರ್ಷಿಕ ಪ್ಯಾಕೇಜ್ ನಲ್ಲಿ ಉದ್ಯೋಗ ಪಡೆದು ಉದ್ಯೋಗಿಗಳಾಗಿರುವ ಶಿಕ್ಷಣ ಸಂಸ್ಥೆ ಗೌರವವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/01/2022 07:40 pm