ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕರಾಟೆ ಕಲಿಯುತ್ತಿದ್ದಾರೆ ವಿದ್ಯಾರ್ಥಿನಿಯರು.. ಚುಡಾಯಿಸಿದರೆ ಹುಷಾರ್..!

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಲ್ಲಿ ಸ್ವಯಂ ರಕ್ಷಣಾ ಕೌಶಲ್ಯ ಬೆಳೆಸಲು ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ವಿದ್ಯಾರ್ಥಿನಿಯರಿಗೆ ಕರಾಟೆ, ಜುಡೋ, ಟೇಕ್ವಾಂಡೊ ಮತ್ತಿತರ ಸಮರ ಕಲೆಗಳ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಹುಬ್ಬಳ್ಳಿ, ಧಾರವಾಡ ಅವಳಿ ನಗರದ ಐದು ಹಾಸ್ಟೆಲ್‌ಗಳಲ್ಲಿ ಜನೇವರಿ 1 ರಿಂದ ಕರಾಟೆ ತರಬೇತಿ ಪ್ರಾರಂಭವಾಗಿದೆ. 1105 ವಿದ್ಯಾರ್ಥಿನಿಯರಿಗೆ 60 ದಿನಗಳ ಕಾಲ ಈ ತರಬೇತಿ ನಡೆಯಲಿದೆ.

ಧಾರವಾಡದ ಸೈದಾಪುರ, ಮಾಳಮಡ್ಡಿ, ಶಿವಗಿರಿ, ಕರ್ನಾಟಕ ವಿಶ್ವವಿದ್ಯಾಲಯದ ಆವರಣ ಮತ್ತು ಹುಬ್ಬಳ್ಳಿಯ ಶ್ರೇಯಾ ನಗರದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಜ.1ರಿಂದ ಕರಾಟೆ ತರಬೇತಿ ಪ್ರಾರಂಭವಾಗಿದೆ. ಪ್ರತಿ ದಿನ ಮುಂಜಾನೆ ಹಾಗೂ ಸಂಜೆ ಎರಡು ಅವಧಿಗಳಲ್ಲಿ 60 ದಿನಗಳ ಕಾಲ ಸಮರ ಕಲೆಯ ಕೌಶಲಗಳ ಕಲಿಕೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ ಹೇಳಿದ್ದಾರೆ.

ಸ್ವಯಂ ರಕ್ಷಣಾ ಕೌಶಲಗಳನ್ನು‌ ಅರಿಯಲು ವಿದ್ಯಾರ್ಥಿನಿಯರು ಆಸಕ್ತರಾಗಿದ್ದು, ಉತ್ಸಾಹದಿಂದ ತರಬೇತಿ ಪಡೆಯುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

04/01/2022 04:46 pm

Cinque Terre

47.77 K

Cinque Terre

12

ಸಂಬಂಧಿತ ಸುದ್ದಿ