ಧಾರವಾಡ: ತಮ್ಮದೇ ಆದ ವಿಶಿಷ್ಟ ಚಿಂತನೆಯ ಮೂಲಕ ಗಣಿತದ ಮಹತ್ವದ ಸಿದ್ಧಾಂತಗಳನ್ನು ನಿರೂಪಿಸಿ ಶ್ರೇಷ್ಠತೆ ಸಂಪಾದಿಸಿದ್ದ ಶ್ರೀನಿವಾಸ್ ರಾಮಾನುಜನ್ ಗಣಿತದ ಮೇರು ಪ್ರತಿಭೆಯಾಗಿದ್ದರು ಎಂದು ಗ್ರಾಮೀಣ ತಾಲೂಕು ಬಿಇಓ ಉಮೇಶ ಬಮ್ಮಕ್ಕನವರ ಹೇಳಿದರು.
ಅವರು ತಮ್ಮ ಕಚೇರಿಯ ಸಹಯೋಗದೊಂದಿಗೆ ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವು ತಾಲೂಕಿನ ಗರಗದ ಜಯಕೀರ್ತಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಭಾಗೀರಥಿ ದೇವರಮನಿ ದತ್ತಿಯ ಗಣಿತ ಓಲಂಪಿಯಾಡ್ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ನಿವೃತ್ತ ಡಿಡಿಪಿಐ ಎಸ್.ಬಿ. ಕೊಡ್ಲಿ ಮಾತನಾಡಿ, ವಿದೇಶದ ವಿಶ್ವವಿದ್ಯಾಲಯಗಳೂ ಸಹಿತ ಶ್ರೀನಿವಾಸ್ ರಾಮಾನುಜನ್ ಅವರ ಗಣಿತದ ಸೂತ್ರಗಳನ್ನು ಮೆಚ್ಚಿಕೊಂಡಿದ್ದು, ಇದು ಅವರ ಅಗಾಧವಾದ ಗಣಿತದ ಪಾಂಡಿತ್ಯವನ್ನು ಸಾಕ್ಷೀಕರಿಸುತ್ತದೆ ಎಂದರು.
ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದಲ್ಲಿ ದತ್ತಿನಿಧಿ ಸ್ಥಾಪಿಸಿರುವ ಲೇಖಕ ಕೆ.ಜಿ.ದೇವರಮನಿ ರಾಷ್ಟ್ರೀಯ ಗಣಿತ ದಿನದ ಮಹತ್ವ ವಿವರಿಸಿದರು. ಗರಗದ ಜಯಕೀರ್ತಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎಸ್.ಡಿ. ಕುರಕುರಿ ಅಧ್ಯಕ್ಷತೆ ವಹಿಸಿದ್ದರು.
Kshetra Samachara
25/12/2021 10:18 pm