ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಕ್ಕಳ ಚಿಲಿಪಿಲಿ ಕಲರವ ಕಳೆಗಟ್ಟುತ್ತಿವೆ ಅಂಗನವಾಡಿಗಳು

ಈರಣ್ಣ ವಾಲಿಕಾರ

ಹುಬ್ಬಳ್ಳಿ: ಕೊರೊನಾ ಮಹಾಮಾರಿಗೆ 2020ರ ಮಾರ್ಚ್ ಮಧ್ಯಭಾಗದಲ್ಲಿ ಎಲ್ಲ ಅಂಗನವಾಡಿಗಳು ಮುಚ್ಚಿದ್ದವು. ಆದರೆ ಈಗ ಅಂಗನವಾಡಿ ಮತ್ತೆ ಆರಂಭಗೊಂಡಿವೆ.

ಮಕ್ಕಳು ಹಾಗೂ ಪೋಷಕರು ಮತ್ತು ಶಿಕ್ಷಕ ವೃಂದಕ್ಕೂ ಮತ್ತೆ ಚೈತನ್ಯ ಸಿಕ್ಕಂತಾಗಿದೆ. ಪೋಷಕರ ಒಪ್ಪಿಗೆ ಮೇಲೆ ಅಂಗನವಾಡಿಗಳಿಗೆ ಮಕ್ಕಳ ಹಾಜರಾಗಿದ್ದಾರೆ. ಖುಷಿಯಾಗಿ ಆಟ-ಪಾಠ ಜೊತೆಗೆ ಪೌಷ್ಟಿಕಾಂಶದ ಆಹಾರ ಸೇವನೆನೂ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬಂದಿದ್ದಾರೆ. ಸರಕಾರ ಪ್ರತಿಯೊಂದು ಮಕ್ಕಳಿಗೆ ಪೌಷ್ಟಿಕತೆ ಕೊರತೆ ಆಗದಂತೆ ಮೊಟ್ಟೆ, ಬೆಲ್ಲ, ಚಿಕ್ಕಿ ಹಾಲು ಹಾಗೂ ಅಕ್ಕಿ ನೀಡುವುದನ್ನ ಈಗ ಮತ್ತೆ ಮುಂದುವರೆಸಿದೆ.

ಒಟ್ಟಿನಲ್ಲಿ ಅಂಗನವಾಡಿ ಓಪನ್ ಆಗಿರೋದ್ರಿಂದ ಮಕ್ಕಳ ಚಿಲಿಪಿಲಿ ಕಲರವ ಈಗ ಮತ್ತೆ ಕೇಳಿ ಬರುತ್ತಿದೆ.

Edited By : Nagesh Gaonkar
Kshetra Samachara

Kshetra Samachara

22/12/2021 04:08 pm

Cinque Terre

17.06 K

Cinque Terre

1

ಸಂಬಂಧಿತ ಸುದ್ದಿ