ಕುಂದಗೋಳ : ಮೂಲ ಸೌಕರ್ಯಗಳ ಸುಮಸ್ಯೆ ಜೊತೆಗೆ ಕಳಪೆ ಆಹಾರ ಪೂರೈಕೆ ಹಾಗೂ ವಸತಿ ಸಮಸ್ಯೆಗೆ ಸಂಬಂಧಿಸಿದಂತೆ ಇಂದು ಕುಂದಗೋಳ ತಾಲೂಕಿನ ನೆಲಗುಡ್ಡ ಬು.ತರ್ಲಘಟ್ಟ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಎದುರು ಊರಿ ಬಿಸಿಲನಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದ ತಮ್ಮ ಸೌಲಭ್ಯ ನ್ಯಾಯ ಕೇಳುವ ಮಕ್ಕಳ ಹೋರಾಟ ಶಾಂತವಾಗಿದೆ.
ಹೌದು ! ಮೇಲಾಧಿಕಾರಿಗಳು ಬಂದು ತಮ್ಮ ಸಮಸ್ಯೆ ಬಗೆಹರಿಸುವರೆಗೂ ಸ್ಥಳ ಬಿಟ್ಟು ಕದಲದೆ ತಮ್ಮ ಮೂಲಸೌಕರ್ಯ ಕೇಳುತ್ತಿದ್ದ ಮಕ್ಕಳ ಧ್ವನಿಗೆ ಓಗೊಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮನ್ವಯ ಅಧಿಕಾರಿ ಪರಮೇಶಪ್ಪ ಹುಲಗಂಜಿ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳನ್ನು ಸಮಾಧಾನ ಪಡಿಸಿ ಅಗತ್ಯ ಸೌಲಭ್ಯ ಒದಗಿಸಿ ಕೊಡುತ್ತೇವೆ ಮಕ್ಕಳು ಇರುವುದರಿಂದ ನಾನು ಸಹ ಕರ್ತವ್ಯ ಮಾಡಿ ತುತ್ತು ಅನ್ನ ಉಣ್ಣುತ್ತೇನೆ, ನೀವೂ ಮೇಲೆದ್ದು ನೀರು ಕುಡಿದು ತರಗತಿಗೆ ಹಾಜರಾಗಿ ನಾನು ಸಂಜೆವರೆಗೂ ಸ್ಥಳದಲ್ಲೇ ಇದ್ದು ಅಗತ್ಯ ಸೌಕರ್ಯ ಒದಗಿಸುವುದಾಗಿ ಹೇಳಿದರು.
ಸಮನ್ವಯ ಅಧಿಕಾರಿಗಳು ಮಾತಿಗೆ ತ್ರಿವಳಿ ಗ್ರಾಮದ ಪಂಚಾಯಿತಿ ಸದಸ್ಯರು ಹಾಗೂ ಮಕ್ಕಳ ಪಾಲರೂ ಪೋಷಕರು ಮಕ್ಕಳನ್ನು ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಿದಾಗ ತಮ್ಮ ಸೌಕರ್ಯ ಒದಗಿಸಿದೇ ಇದ್ದಲ್ಲಿ ಮತ್ತೇ ಹೋರಾಟ ಖಚಿತ ಎಂದ ಮಕ್ಕಳು ಹೋರಾಟ ಹಿಂಪಡೆದರು.
Kshetra Samachara
08/12/2021 04:55 pm