ಕುಂದಗೋಳ : ಇಲ್ಲೋಂದು ಶಾಲೆಯಲ್ಲಿ ವಯಸ್ಸು ಹದಿನೇಂಟು ಆಗುವ ಮೊದಲೇ ಮಕ್ಕಳು ಮತದಾನ ಮಾಡಿದ್ದಾರೆ, ತಮ್ಮ ಆಯ್ಕೆ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಚುನಾಯಿಸಿ ಸಂಸತ್ತು ರಚಿಸಿ ಆಡಳಿತ ನಡೆಸಲು ಎಸ್ ಎಂದಿದ್ದಾರೆ.
ಕುಂದಗೋಳ ತಾಲೂಕಿನ ಬು.ಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳೇ, ಇಂತಹ ಮತದಾನ ಜಾಗೃತಿ ಕಾರ್ಯಕ್ರಮ ಜೊತೆ ಮತದಾನದ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದಿದ್ದಾರೆ.
ಶಾಲಾ ವಿದ್ಯಾರ್ಥಿಗಳು ಒಬ್ಬ ಪ್ರಧಾನ ಮಂತ್ರಿ ಸೇರಿ 9 ಜನ ಮಂತ್ರಿಗಳನ್ನು, ಥೇಟ್ ಚುನಾವಣೆ ಆಯೋಗದ ಮತದಾನದಂತೆ ಮತಗಟ್ಟೆ ಮಾಡಿ, ಮತ ಚಲಾಯಿಸಿ, ಬೆರಳಿಗೆ ಶಾಹಿ ಹಾಕಿಸಿಕೊಂಡು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ.
ಇನ್ನೂ ವಿಶೇಷವಾಗಿ 9 ಜನ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ತಮ್ಮ ಪರವಾಗಿ ಎರೆಡು ದಿನ ಪ್ರಚಾರ ಸಹ ನಡೆಸಿದ್ದಾರೆ.
ಇಷ್ಟೇಲ್ಲಾ ಚುನಾವಣೆ ರೀತಿ ರೀವಾಜುಗಳನ್ನು ಮಕ್ಕಳಿಗೆ ತಿಳಿಸಲು ಸ್ವತಃ ಶಾಲಾ ಶಿಕ್ಷಕರೇ ಚುನಾವಣೆಯ ವಾತಾವರಣವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಹಾಗೂ ಮತದಾನದ ಅರಿವು ಮೂಡಿಸಿ ನೋಟಾ ಮತ ಪರಿಕಲ್ಪನೆ ತಿಳಿಸಿ ಮತ ಹಾಕಲು ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ.
Kshetra Samachara
10/11/2021 05:01 pm