ವರದಿ: ಪ್ರಶಾಂತ ಲೋಕಾಪುರ
ಧಾರವಾಡ: ಅವರೆಲ್ಲರೂ ಜೈಲಿನಲ್ಲಿಯೇ ತಮ್ಮ ಜೀವನವನ್ನು ಕಳೆಯುತ್ತಿರುವ ಜನ ಆದರೆ ಜೈಲಿನಲ್ಲಿದ್ದರೂ ಕೂಡ ತಮ್ಮಲ್ಲಿರುವ ಕಲೆಯನ್ನು ಅವರೂ ಮರೆತಿಲ್ಲ.ಇಂಥ ಜೈಲು ಹಕ್ಕಿಗಳಿಗೆ ಶಿಕ್ಷಣ ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯದ ಎಲ್ಲಾ ಕಾರಾಗೃಹದಲ್ಲಿರುವ ಜೈಲು ಹಕ್ಕುಗಳಿಗಾಗಿ ವಿಶೇಷ ಪಾಠ ಪ್ರವಚನ ನೀಡುವ ಯೋಜನೆಯ ರೂಪಿಸಿದೆ
ಹೌದು! ನ. 1 ರಿಂದ ರಾಜ್ಯದ ಎಲ್ಲಾ ಕಾರಾಗೃಹದಲ್ಲಿರುವ ಬಂದಿಗಳಿಗೆ ಶಿಕ್ಷಣ ಮತ್ತು ಕೌಶಲ್ಯದ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ನವಚೇತನ ಎಂಬ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಟ್ಟು 120 ಅನಕ್ಷರಸ್ಥ ಮತ್ತು ಅರೆಅಕ್ಷರಸ್ತರಿಗೆ ಬೃಹತ್ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇದರ ವೈಶಿಷ್ಟ್ಯತೆಯನ್ನು ಕಾರಾಗೃಹದಲ್ಲಿರುವ ವಿದ್ಯಾವಂತ ಬಂದಿಗಳು ಕಲಿಸುವುದು ವಿಶೇಷವಾಗಿದೆ.
ಜಿಲ್ಲಾಲೋಕ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿಯಿಂದ ಇಲಾಖೆಯ ವಿದ್ಯಾದೀವಿಗೆ ಯೋಜನೆಯಲ್ಲಿ ಶಿಕ್ಷೆಯಿಂದ ಶಿಕ್ಷಣದೆಡೆಗೆ ಘೋಷವಾಕ್ಯದಡಿ ಕಾರಾಗೃಹದಲ್ಲಿ ಜೈಲು ಹಕ್ಕಿಗಳಿಗೆ ಪಾಠ ಕಲಿಸಲು ನಾಳೆಯಿಂದ ಇಬ್ಬರು ಶಿಕ್ಷಕರು ತಯಾರಿಯಲ್ಲಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಧಾರವಾಡ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ
ಎಂ.ಎ. ಮರಿಗೌಡರ ಮಾತನಾಡಿ,ಅನಕ್ಷರಸ್ಥ ಒಟ್ಟು 120 ಬಂದಿಗಳನ್ನು ಗುರುತಿಸಿ ಅವರನ್ನ ಶಿಕ್ಷಣ ನೀಡಲಿದ್ದೇವೆ ಎಂದು ಅವರು ಹೇಳಿದರು.
ಅನಕ್ಷರಸ್ಥರನ್ನು ಸಾಕ್ಷರತರನ್ನಾಗಿ ಮಾಡಿವುದರ ಜೊತೆಗೆ ಅವರಿಗೆ ನೀರತರ ಕಲಿಯುವ ಆಸೆ ಹುಟ್ಟಿಸುವಂತಿರಬೇಕು"ಎಂಬುದು ಮಹಾತ್ಮ ಗಾಂಧಿಜಿಯವರ ಮಾತಿನಂತೆ ಮತ್ತು ನಿಮ್ಮ ಹತ್ತಿರದಲ್ಲಿರುವವರಿಗೆ,ಪರಿಚಿತರಿಗೆ,ಅಕ್ಷರ ಕಲಿಸಿ ಹಾಗೂ ಅರಿವು ಮೂಡಿಸಿ ಸ್ವಾವಲಂಬಿಗಳನ್ನಾಗಿ ಮಾಡಿ ಎಂದು ಡಾ.ಬಿ.ಆರ್ ಅಂಬೇಡ್ಕರ್ ಅವರ ಮಾತಿನಂತೆ ಈ ಯೋಜನೆ ರೂಪಿಸಿದೆ.
Kshetra Samachara
31/10/2021 07:40 pm