ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕೋವಿಡ್ ಗ್ರಹಣ ಕಳೆಯಲಿ ಬೇಗ, ಆರಂಭವಾಗಲಿ ಅಂಗನವಾಡಿ

ಕುಂದಗೋಳ: ಇಲ್ಲೊಂದು ಗ್ರಾಮದಲ್ಲಿ ಕೊರೊನಾ ನಡುವೆ ಇನ್ನೂ ಸರಿಯಾಗಿ ಶಾಲೆಗಳೇ ಆರಂಭವಾಗಿರದ ದಿನಗಳಲ್ಲಿ ಅದಾಗಲೇ ಪಾಲಕರು ಅಂಗನವಾಡಿ ಯಾವಾಗ ಆರಂಭ ಮಾಡ್ತೀರಾ? ಯಾವಾಗ ಮಕ್ಕಳಿಗೆ ಶಿಕ್ಷಣ ಕೊಡ್ತಿರಾ ಎಂದು ಪ್ರಶ್ನಿಸುತ್ತಿದ್ದಾರೆ.

ಅರೆ.! ಈ ಪಾಲಕರು ಹೀಗೆ ಕೇಳಲು ಒಂದು ಮುಖ್ಯ ಕಾರಣವೂ ಇದೆ. ಅದೇನಪ್ಪಾ ಅಂದ್ರಾ ? ಇಲ್ನೋಡಿ ಕಲಿಕಾಕ್ಷರದ ಸಾಲುಗಳಿಂದ ಕಂಗೊಳಿಸುವ ಗೋಡೆ, ಹೊಸ ಕಪ್ಪು ಹಲಗೆ, ನೈರ್ಮಲ್ಯದ ವಾತಾವರಣದ ಹೊಸ ಕಟ್ಟಡ, ಮಕ್ಕಳಿಗೆ ಮಾನಸಿಕ ಬೆಳವಣಿಗೆ ಜೊತೆ ಕ್ರೀಡಾಸಕ್ತಿ ತೋರುವ ಆಟೋಟದ ಸಾಮಗ್ರಿ ನಿರ್ಮಾಣದ ಹಂತದಲ್ಲಿರುವ ಉದ್ಯಾನವನ ಇಷ್ಟು ಸಾಕಲ್ಲವೇ ಪಾಲಕರು ಅಂಗನವಾಡಿ ಯಾವಾಗ ಆರಂಭ ಮಾಡ್ತೀರಾ ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ್ದೀರಾ ಎಂದು ಕೇಳಲು.

ಇಂತಹ ಪ್ರಶ್ನೆಗೆ ಸಾಕ್ಷಿಯಾದ ಗ್ರಾಮವೇ ಕುಂದಗೋಳ ತಾಲೂಕಿನ ಅಲ್ಲಾಪೂರ, ಈ ಗ್ರಾಮದ ಅಂಗನವಾಡಿ ಅಭಿವೃದ್ಧಿಯನ್ನು ಸ್ವತಃ ಶಾಸಕಿ ಕುಸುಮಾವತಿ ಶಿವಳ್ಳಿ ಭೇಟಿ ನೀಡಿ ವೀಕ್ಷಿಸಿ ಬೇಷ್ ಎಂದಿದ್ದಾರೆ.

ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದ ಅಂಗನವಾಡಿ ಕಟ್ಟಡ ಈ ರೀತಿ ಅಭಿವೃದ್ಧಿ ಹೊಂದಿದ್ದು, ಯಾವಾಗ ಕೋವಿಡ್ ಗ್ರಹಣ ಕಳೆದು ಮಕ್ಕಳು ಈ ಹೊಸ ಅಂಗನವಾಡಿ ಪಾಠ ಕೇಳ್ತಾರೋ ಹೇಗೆ ನಕ್ಕು ನಲಿಯುತ್ತಾರೋ ಕಾದು ನೋಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

14/09/2021 03:28 pm

Cinque Terre

32.77 K

Cinque Terre

0

ಸಂಬಂಧಿತ ಸುದ್ದಿ