ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಒಂಬತ್ತು ಹತ್ತನೇ ತರಗತಿ ಆರಂಭ, ಶಾಲೆಗೆ ಶಾಸಕಿ ಭೇಟಿ

ಕುಂದಗೋಳ : ಕೊರೊನಾ ವೈರಸ್ ಆರ್ಭಟದ ನಡುವೆ ಕದ ತಟ್ಟಿದ್ದ ಸರ್ಕಾರಿ ಶಾಲೆಗಳು ಹಂತ ಹಂತವಾಗಿ ಬಾಗಿಲು ತೆರೆಯುತ್ತಿದ್ದು ಅದರಂತೆ ಇಂದು ಒಂಬತ್ತು ಮತ್ತು ಹತ್ತನೆ ತರಗತಿಯ ವಿದ್ಯಾರ್ಥಿಗಳು ಕೊರೊನಾ ಮುಂಜಾಗ್ರತಾ ಕ್ರಮಗಳ ನಡುವೆ ಸರ್ಕಾರಿ ಶಾಲೆಗಳಿಗೆ ಬಲಗಾಲಿಟ್ಟರು.

ಶಾಲೆಗಳು ಪುನಃ ಆರಂಭವಾದ ಮೊದಲ ದಿನವಾದ ಇಂದು ಶಾಸಕಿ ಕುಸುಮಾವತಿ ಶಿವಳ್ಳಿ ಕುಂದಗೋಳ ಮತಕ್ಷೇತ್ರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳಲ್ಲಿ ಕೊರೊನಾ ಮುಂಜಾಗ್ರತೆಗಾಗಿ ಕೈಗೊಂಡ ಕ್ರಮ ಪರಿಶೀಲಿಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಯೋಗ ಕ್ಷೇಮ ವಿಚಾರಿಸಿದರು.

ತಾಲೂಕಿನ ಹರ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆಗೆ ಭೇಟಿ ನೀಡಿದ ಶಾಸಕಿ ಕುಸುಮಾವತಿ ಶಿವಳ್ಳಿ ಶಿಕ್ಷಕರಿಗೆ ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ಅಭ್ಯಾಸದ ಬಗ್ಗೆ ಮುತುವರ್ಜಿ ವಹಿಸುವಂತೆ ಸಲಹೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

23/08/2021 07:58 pm

Cinque Terre

111.37 K

Cinque Terre

1

ಸಂಬಂಧಿತ ಸುದ್ದಿ