ಕಲಘಟಗಿ: ಪ್ರಸಕ್ತ ಸಾಲಿನ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಗಮೇಶ್ವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಿರ್ಮಲ ಮಲ್ಲಯ್ಯ ಕರಡಿಮಠ ಶೇಕಡಾ 97.12 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.
ಕಲಘಟಗಿ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ನಿಯು ಗಣಿತದಲ್ಲಿ 100 ಕ್ಕೆ 100 ಅಂಕ ಪಡೆದಿರುವುದು ವಿಶೇಷ ಸಾಧನೆಯಾಗಿದೆ.ಮಾರ್ಗದರ್ಶನ ಮಾಡಿದ ಗಣಿತ ವಿಷಯ ಶಿಕ್ಷಕ ಎನ್ ವಿ ನಾಯ್ಕ ಹಾಗೂ ವಿದ್ಯಾರ್ಥಿನಿಗೆ ಮುಖ್ಯೋಪಾಧ್ಯಾಯ ಎಂ ಎಂ ಕಡೇಮನಿ ಹಾಗೂ ಶಾಲಾ ಸಿಬ್ಬಂದಿ ವರ್ಗ ಶ್ಲಾಘನೆ ವ್ಯಕ್ತಪಡಿಸಿ,ಸನ್ಮಾನಿಸಿ ಗೌರವಿಸಿದ್ದಾರೆ.
Kshetra Samachara
16/08/2021 07:59 pm