ಹುಬ್ಬಳ್ಳಿ: ವಿಜ್ಞಾನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸಾಧನೆಗೆ ಹುಬ್ಬಳ್ಳಿಯ ಆರ್.ಬಿ.ಪಾಟೀಲ ಮಹೇಶ ಪಿಯು ಸೈನ್ಸ್ ಕಾಲೇಜು ಸಿದ್ಧವಾಗಿದ್ದು, ವಿದ್ಯಾರ್ಥಿಗಳಿಗಾಗಿ ಅಧುನಿಕ ಶೈಲಿಯ ಶೈಕ್ಷಣಿಕ ಮಾದರಿಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಿದ್ಧವಾಗಿದೆ.
ಹೌದು.. ವಿಜ್ಞಾನ ತಂತ್ರಜ್ಞಾನದಲ್ಲಿ ಹೊಸ ಸಂಚಲನ ಸೃಷ್ಟಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲು ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಡಾ. ಆರ್.ಬಿ.ಪಾಟೀಲ ಮಹೇಶ ವಿಜ್ಞಾನ ಪದವಿ ಪೂರ್ವ ಕಾಲೇಜು ಸನ್ನದ್ಧವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುತ್ತಿರುವ ಕಾಲೇಜು ಭವ್ಯ ಭಾರತದ ಗಣ್ಯವ್ಯಕ್ತಿಗಳನ್ನಾಗಿ ಮಾಡುವ ಮಹತ್ವದ ಕನಸನ್ನು ಕಟ್ಟಿಕೊಂಡಿದೆ.
ಹುಬ್ಬಳ್ಳಿ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಹತ್ತಿರದ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಈ ಕಾಲೇಜು ಸುಮಾರು ಹತ್ತು ವರ್ಷಗಳಿಂದ ಗುಣಾತ್ಮಕ ಶಿಕ್ಷಣ, ಶಿಸ್ತು ಬದ್ಧತೆಗೆ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾಲೇಜು ಅಂದರೆ ಡಾ.ಆರ್.ಬಿ.ಪಾಟೀಲ ಮಹೇಶ ಪಿಯು ಕಾಲೇಜು. ಭವ್ಯವಾದ ಕಟ್ಟಡ, ಸುಸಜ್ಜಿತ ಪ್ರಯೋಗಾಲಯಗಳು, ಸಾಕಷ್ಟು ಗ್ರಂಥ ಭಂಡಾರವನ್ನು ಹೊಂದಿರುವ ಗ್ರಂಥಾಲಯಗಳು, ಆಕರ್ಷಕ ಕೊಠಡಿಗಳು ನೋಡುಗರ ಕಣ್ಮನ ಸೆಳೆಯುವ ವಾತಾವರಣವನ್ನು ಈ ಕಾಲೇಜು ಹೊಂದಿದೆ.
ಚೇರಮನ್ ಪಿ.ವಿ.ದತ್ತಿ ಹಾಗೂ ಕಾರ್ಯದರ್ಶಿ ರಾಜಾ ಎನ್.ದೇಸಾಯಿಯವರ ನಿರ್ದೇಶನದಲ್ಲಿ ಕಾಲೇಜು ಸಾಕಷ್ಟು ಸಾಧನೆಗಳನ್ನು ಮಾಡಿದೆ. ಪ್ರತಿವರ್ಷ
400 ಜನ ವಿದ್ಯಾರ್ಥಿಗಳು ಕಾಲೇಜಿನಿಂದ ತೇರ್ಗಡೆ ಹೊಂದುತಿದ್ದು, ಸುಮಾರು 800 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನೂ ವಿಶೇಷ ಅಂದರೆ ವಿದೇಶದಿಂದ ಬಂದಿರುವ ವಿದ್ಯಾರ್ಥಿಗಳು ಕೂಡ ಮಹೇಶ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅರಬ್ ದೇಶದಲ್ಲಿಂದ ಬಂದಿರುವ ವಿದ್ಯಾರ್ಥಿಗಳ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಅಲ್ಲದೇ ದೇಶದ ವಿವಿಧ ರಾಜ್ಯಗಳಿಂದ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಿರುವುದು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ.
ಪಠ್ಯ ಚಟುವಟಿಕೆಗಳಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕಾಲೇಜು ಸಾಧನೆ ಮಾಡಿದೆ. ಇನ್ನೂ ಈ ವರ್ಷದ ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜು ಮಹತ್ವದ ಸಾಧನೆಯನ್ನು ಮಾಡಿದ್ದು, ಶ್ರೇಯಾ ಪೈ, ಮೇಘನಾ ಕುರ್ತಕೋಟಿ, ಆದಿತಿ ಸಬನಿಸ್ ಈ ಮೂರು ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ಇನ್ನೂ ವೈಭವಿ ಪ್ರಭು ಮತ್ತು ದೇವಿಕಾ ವಿಜಾಪುರ ವಿದ್ಯಾರ್ಥಿಗಳು 600ಕ್ಕೆ 597 ಅಂಕಗಳನ್ನು ಪಡೆದಿದ್ದಾರೆ. ಅಲ್ಲದೆ ಅನುಷಿಕಾ ಕೊಠಾರಿ ತೃತೀಯ ಸ್ಥಾನ ಪಡೆದಿದ್ದು, ಕಾಲೇಜಿನ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಿದ್ದಾರೆ. ಇನ್ನೂ ಇಲ್ಲಿ ಕಲಿತಿರುವ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, NEET, JEE, NATA, NDA, BSC AGRI ಗಳಲ್ಲಿ ಅತ್ಯುನ್ನತ ರ್ಯಾಂಕ್ ಪಡೆದಿದ್ದಾರೆ. ಮೆಡಿಕಲ್ ನಲ್ಲಿ ಪ್ರತಿಕ್ಷಾ ಪೈ ರಾಜ್ಯಕ್ಕೆ ಎಂಟನೇ ರ್ಯಾಂಕ್, ನಿಖಿಲಾ ಕ್ಯಾತಪ್ಪನವರ ಇಂಜಿನಿಯರಿಂಗ್ ವಿಭಾಗದಲ್ಲಿ 39ನೇ ರ್ಯಾಂಕ್ ಪಡೆದಿದ್ದಾರೆ.
ಡಾ.ಆರ್.ಬಿ.ಪಾಟೀಲ ಮಹೇಶ ಪಿಯು ಸೈನ್ಸ್ ಕಾಲೇಜಿ
ಪ್ರಿಯದರ್ಶಿನಿ ಕಾಲೋನಿ, ಅಕ್ಷಯಪಾರ್ಕ್ ಹತ್ತಿರ ಗೋಕುಲ ರೋಡ ಹುಬ್ಬಳ್ಳಿ
ದೂರವಾಣಿ ಸಂಖ್ಯೆ: 7899856022, 7349417944
Kshetra Samachara
14/08/2021 10:22 am