ಕುಂದಗೋಳ : 1996 ರ ನಮ್ಮ ಸಾಹಸಸಿಂಹ ಡಾ.ವಿಷ್ಣುವರ್ಧನ ಸಿನಿಮಾದಾಗ ಒಂದು ಸಾಂಗ್ ಸೂಪರ್ ಐತಿ ಕೇಳಿರೇನು ?
ಶಾಲೆಗೆ ಈ ದಿನಾ ರಜಾ ನೌಕರಿಗೆ ಈ ದಿನಾ ಸಜಾ.
ಈ ಸಾಂಗ್ ಇವಾಗ್ ಯಾಕ್ ಅಂದ್ರ, ಕೊರೊನಾ ಮೊದಲ ಮತ್ತು ಎರಡನೇ ಅಲೆಗೆ ಕ್ಲೋಸ್ ಆದಂತಹ ನಮ್ಮ ಸರ್ಕಾರಿ ಶಾಲೆಗಳು ಆಗಸ್ಟ್ ತಿಂಗಳದಾಗ ಚಾಲೂ ಅಕ್ಕಾವ್ ಅಂತ್ಹೇಳಿ, ಈಗ ಚಾಲೂ ಮಾಡೋ ಮುನ್ಸೂಚನೆಯನ್ನು ಹಂಗ್ ಮುಂದ್ ಮುಂದ್ ಹಾಕೋತ್ ಹೊಂಟಾರ್ ನೋಡ್ರೀ ಮಕ್ಕಳು ಅರ್ಧ ತಾಸ್ ಆನ್ಲೈನ್ ಕ್ಲಾಸ್ ಕೇಳಿ ಆ ಮ್ಯಾಲ್ ಏನು ? ಮಾಡಕತ್ತಾರ್ ಗೊತ್ತ ಎನ್ರೀ ನೀವ್ ನೋಡ್ರಿ.
ಎಲ್ಲೇರ್ ಕೆಲಸಕ್ಕ ಹೋಗೋದು ಗುಂಡಾ, ಆಡೋದು, ಸಭೆ ಸಮಾರಂಭದಾಗ ಡ್ಯಾನ್ಸ್ ಮಾಡೋದು, ಅಷ್ಟೇ ಯಾಕ್ರೀ ಈ ಕಣ್ಣಾ ಮುಚ್ಚಾಲೆ ಆಟ ಆಡೋದು ಕಡಕೆ ಜಗಳಾ ಮಾಡೋದು, ಎಲ್ಲೇರ್ ಬಿದ್ದು ಬರೋದು, ಮನ್ಯಾಗ ಮಂದಿಗೆ ರೊಕ್ಕಕ್ಕ ಗಂಟ್ ಬಿಡೋದು.
ಈ ಕಳೆದ ಎರೆಡು ವರ್ಷಗಳಿಂದ ಕೊರೊನಾ ಮಹಾಮಾರಿ ಸಲುವಾಗಿ ಶಾಲಿ ಕ್ಲೋಸ್ ಆಗಿದ್ದ ತಡಾ ಮಕ್ಕಳ ವಿದ್ಯಾಭ್ಯಾಸದ ಜೊತೆ ಅವರ ಭವಿಷ್ಯದ ಚಿಂತೆ ಪಾಲಕರನ್ನು ಕಾಡ್ತಾ ಇದೆ. ಪಾಲಕರು ಕೆಲಸಕ್ಕೆ ಹೋಗೋದೋ, ಮಕ್ಕಳನ್ನ ಕಾಯೋದೋ ಪಾಠ ಮಾಡೋದೋ ಯಾವುದು ತಿಳಿಲಾರದೇ ಬೇಸತ್ತು ಹೋಗ್ಯಾರ್. ನಾವ್ ಅಮ್ಮಾ ಶಾಲಿ ಚಾಲೂ ಆಗ್ಬೇಕಾ ಅಂದ್ರೇ ಏನು ಹೇಳಿದ್ರು ಗೊತ್ತಾ.
ಈ ಗಂಡಸರು ಏನೋ ತಲಿ ಕೆಡಸ್ಕೊಲಾರದ ಮಕ್ಕಳ ಬಿಟ್ಟು ಹೊರಗೆ ಹೋಗಿ ಬಿಡ್ತಾರ, ಪಾಪಾ ತಾಯಿಗಳು, ಅಜ್ಜಿ, ಅತ್ತೆ, ಒಟ್ಟ್ ಹೆಣ್ಮಕ್ಕಳ ಪರಿಸ್ಥಿತಿ ಏನು ಕೇಳಿರಿ ಅವ್ರು ತಲಿ ಕೆಟ್ಟ್ ಹೋಗಿತಿ ಅಂತ್.
ನೋಡ್ರಿ ಗಣ ಕರ್ನಾಟಕ ಸರ್ಕಾರ ಏನಾದ್ರೂ ಚಿಂತನೆ ನಡೆಸಿ ಶಾಲಿ ಚಾಲೂ ಮಾಡಸ್ರೀ ಹಿಂಗ್ ಹೇಳಿದ್ದೂ ನಮ್ಮ ಶಾಲಿ ಮಕ್ಕಳ ಪೋಷಕರು.
ಶ್ರೀಧರ ಪೂಜಾರ,
ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
06/08/2021 10:32 am