ಕುಂದಗೋಳ : ಎಸ್ಡಿಎಂಸಿ ಸದಸ್ಯರು ಶಾಲಾ ಅಭಿವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳೇನು ಮತ್ತು ಒಂದು ಎಸ್ಡಿಎಂಸಿ ರಚನೆ ನಂತರ ಶಾಲಾ ಅಭಿವೃದ್ಧಿ ಪರವಾಗಿ ನಿರ್ವಹಿಸಬೇಕಾದ ಕಾರ್ಯಗಳು ಯಾವುವು ಎಂಬುದರ ಬಗ್ಗೆ ಕ್ಷೇತ್ರ ಸಿ.ಆರ್.ಪಿ ಅಧಿಕಾರಿ ಜಿ.ಎಮ್.ನಂದಿಮಠ ಹೇಳಿದರು.
ಅವರು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು ನಿಮ್ಮೂರು ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ನಿಮ್ಮ ಶಾಲಾ ಆಡಳಿತ ವ್ಯವಸ್ಥೆ ಬಲ ಪಡಿಸಲು ಎಸ್ಡಿಎಂಸಿ ಸದಸ್ಯರು ಕ್ರಮ ವಹಿಸಿರಿ ಎಂದರು.
ಗುಡೇನಕಟ್ಟಿ ಗ್ರಾಮದ ಬಿಜೆಪಿ ಮುಖಂಡ ಬಸವರಾಜ ಕಲಿವಾಳ ಮಾತನಾಡಿ ಒಂದು ಶಾಲೆ ಶಾಲೆಯ ಅಭಿವೃದ್ಧಿಯಲ್ಲಿ ಎಸ್ಡಿಎಂಸಿ ಸದಸ್ಯರ ಪಾತ್ರ ಮುಖ್ಯ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಎಂದರು.
ಈ ಸಂದರ್ಭದಲ್ಲಿ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಸೊರಟೂರ ಸರ್ವ ಗ್ರಾ.ಪಂ ಸದಸ್ಯರು ಶಾಲಾ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳ ಪಾಲಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
17/02/2021 06:00 pm