ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸರ್ಕಾರಿ ಶಾಲೆ ಕಲರಪುಲ್ ಶಿಕ್ಷಕರು ಕಾರ್ಯಕ್ಕೆ ಜನ ಮೆಚ್ಚುಗೆ

ಕುಂದಗೋಳ : ಸಾರಿಗೆ ಬಸ್ಸಿನ ಬಣ್ಣ ತೊಟ್ಟು ನಿಂತ ಸರ್ಕಾರಿ ಶಾಲೆ ಗೋಡೆಗಳು, ಇವು ನೈಜವೇನು ಎನ್ನುವಂತೆ ಚಿತ್ರಿತವಾದ ಕಾಡು ಪ್ರಾಣಿಗಳು, ನೋಡುಗರ ಗಮನ ಸೆಳೆವ ವಿವಿಧ ಬಗೆ ಬಗೆಯ ತರಕಾರಿ ಚಿತ್ರಗಳು ಎಸ್ ಇವೆಲ್ಲವೂ ಕಂಡು ಬಂದಿದ್ದು ಸರ್ಕಾರಿ ಶಾಲೆಯ ಗೋಡೆಯ ಮೇಲೆ.

ಏನಪ್ಪಾ ! ಈ ಶಾಲೆ ವಿಶೇಷ ಹೀಗೆ ಅಂದ್ರಾ, ಇಲ್ಲಾ ಸ್ವಾಮಿ ಎಲ್ಲ ಶಾಲೆಯಂತೆ ಸಾಮಾನ್ಯವಾಗಿದ್ದ ಈ ಶಾಲೆಯನ್ನು ಮಕ್ಕಳ ಆಕರ್ಷಣೆ ಜೊತೆಗೆ ಶಾಲೆಗೆ ಬರೋ ಮಕ್ಕಳ ಕಲಿಕೆಗೆ ಉತ್ತೇಜಿಸುವ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕ ಬಳಗ ಈ ರೀತಿ ಶಾಲೆ ಗೋಡೆಗಳನ್ನು ಕಲರಪುಲ್ ಮಾಡಿದ್ದಾರೆ.

ಹಿರೇಹರಕುಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಸಂಬಳದ ಹಣದಿಂದ ಶಾಲೆಗೆ ವರ್ಣರಂಜಿತ ಕಲೆ ಸಂಸ್ಕೃತಿ, ಧಾರ್ಮಿಕ, ನಿತ್ಯ ಉಪಯೋಗಿ ವಸ್ತು, ಶಾಲಾ ಮಕ್ಕಳ ಪಠ್ಯ ಭಾಗದ ವಿಷಯ ವಸ್ತು ಹೇಳುವ ಸನ್ನಿವೇಶಗಳನ್ನು ಗೋಡೆಯ ಚಿತ್ರ ಬಿಡಿಸಿದ್ದಾರೆ.

ಒಟ್ಟಾರೆ ಸರ್ಕಾರಿ ಶಾಲೆ ಆಗಮಿಸುವ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನಕ್ಕೆ ತಮ್ಮ ವೇತನವನ್ನು ಕೊಡುಗೆ ನೀಡಿದ ಶಿಕ್ಷಕರ ಶೈಕ್ಷಣಿಕ ಪ್ರೀತಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

17/02/2021 03:55 pm

Cinque Terre

30.24 K

Cinque Terre

9

ಸಂಬಂಧಿತ ಸುದ್ದಿ