ಧಾರವಾಡ: ಮ್ಯಾನೇಜಮೆಂಟ್ ಕೋಟಾದಡಿ ಬಿ.ಇಡಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಧಾರವಾಡದ ಖಾಸಗಿ ಕಾಲೇಜಿನಲ್ಲಿ ನಾವು ವ್ಯಾಸಾಂಗ ಮಾಡುತ್ತಿದ್ದೇವೆ 2019 ರಲ್ಲಿ ಕಾಲೇಜಿಗೆ ಪ್ರವೇಶ ಪಡೆದುಕೊಂಡಿದ್ದೇವೆ. ವಿದ್ಯಾರ್ಥಿ ವೇತನ ಬರುತ್ತದೆ ಎಂದು ಎಸ್ ಸಿ ಹಾಗೂ ಎಸ್ ಟಿ ಮ್ಯಾನೇಜಮೆಂಟ್ ಕೋಟಾದಡಿ ಪ್ರವೇಶ ಪಡೆದಿದ್ದು, ಈಗ ವಿದ್ಯಾರ್ಥಿ ವೇತನ ಬರುವುದಿಲ್ಲ ನೀವು ಎರಡು ವರ್ಷದ ಕಾಲೇಜು ಶುಲ್ಕ ಪಾವತಿ ಮಾಡಬೇಕು ಎಂದು ಕಾಲೇಜಿನವರು ಒತ್ತಾಯ ಮಾಡುತ್ತಿದ್ದಾರೆ.
2018 ರಲ್ಲಿ ವಿದ್ಯಾರ್ಥಿ ವೇತನ ಕಡಿತಗೊಂಡಿರುವ ಬಗ್ಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ, ಆ ಮಾರ್ಗಸೂಚಿ ಕಾಲೇಜುಗಳಿಗೆ 2021ಕ್ಕೆ ಬಂದು ತಲುಪಿದೆ. ಇದರಿಂದ ಮ್ಯಾನೇಜಮೆಂಟ್ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಸರ್ಕಾರ ತನ್ನ ಮಾರ್ಗಸೂಚಿ ವಾಪಸ್ ಪಡೆದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.
Kshetra Samachara
16/02/2021 07:25 pm