ಧಾರವಾಡ : ವಿದ್ಯಾಸಿರಿ ಯೋಜನೆಯಡಿಯಲ್ಲಿ ಒಂದು ವರ್ಷದಿಂದ ಮಂಜೂರಾಗದಿರುವ ಪೂರ್ಣಾವಧಿ ಪಿ.ಹೆಚ್ ಡಿ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡುವಂತೆ ಆಗ್ರಹಿಸಿ ನಗರದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2015-16ನೇ ಸಾಲಿನಿಂದ ದೇವರಾಜ ಅರಸುರವರ ಸ್ಮರಣಾರ್ಥ ಪಿ.ಹೆಚ್‌ಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 5,000 ನೀಡಲು ಆದೇಶ ಹೊರಡಿಸಿರುತ್ತದೆ.
2018-19ನೇ ಸಾಲಿನಿಂದ ಈ ವಿದ್ಯಾರ್ಥಿ ವೇತನದ ಮೊತ್ತವನ್ನು ರೂ.10,000 ಹೆಚ್ಚಿಸಿ ಆದೇಶಿಸಲಾಗಿದೆ
ಆದರೆ 2019-20ನೇ ಸಾಲಿನ ನ ಮಾಹೆಯವರೆಗೆ ವಿದ್ಯಾರ್ಥಿ ವೇತನ ಮಂಜೂರಾಗಿದ್ದು ,ಡಿಸೆಂಬರ್ , 2019 ರಿಂದ ಡಿಸೆಂಬರ್,2020 ರವರೆಗಿನ ಅವಧಿಯಲ್ಲಿ ವಿದ್ಯಾರ್ಥಿ ವೇತನ ಮಂಜೂರಾಗಿರುವುದಿಲ್ಲ ಇದರಿಂದ ವ್ಯಾಸಂಗ ಮಾಡುತ್ತಿರುವ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆಗ್ರಹಿಸಿದರು.
Kshetra Samachara
22/01/2021 01:21 pm