ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೇ.28.31 ರಷ್ಟು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತರಗತಿಗೆ ಹಾಜರು

ಧಾರವಾಡ: ಸರ್ಕಾರ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ತರಗತಿಗಳು ಯಶಸ್ವಿಯಾಗಿ ಪುನರಾರಂಭವಾಗಿವೆ. ಜಿಲ್ಲೆಯ 27 ಸರ್ಕಾರಿ, 38 ಅನುದಾನಿತ ಮತ್ತು 67 ಅನುದಾನರಹಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸಿದ್ದರು.

ಒಟ್ಟು 15128 ವಿದ್ಯಾರ್ಥಿಗಳ ಪೈಕಿ 4283 ವಿದ್ಯಾರ್ಥಿಗಳು ಇಂದು ತರಗತಿಗೆ ಹಾಜರಾಗಿದ್ದು, ಶೇ.28.31 ರಷ್ಟು ಹಾಜರಾತಿ ಇದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಒಟ್ಟು 2,048 ವಿದ್ಯಾರ್ಥಿಗಳ ಪೈಕಿ 573 ವಿದ್ಯಾರ್ಥಿಗಳು, ಶೇಕಡಾವಾರುಗಳಲ್ಲಿ 29.97 ರಷ್ಟು, ಅನುದಾನಿತ ಪದವಿ ಪೂರ್ವ ಕಾಲೇಜಿನ ಒಟ್ಟು 4,273 ವಿದ್ಯಾರ್ಥಿಗಳ ಪೈಕಿ 1,204 ವಿದ್ಯಾರ್ಥಿಗಳು ಶೇ.28.17 ರಷ್ಟು, ಅನುದಾನರಹಿತ ಪ.ಪೂ ಕಾಲೇಜಿನ ಒಟ್ಟು 8,807 ವಿದ್ಯಾರ್ಥಿಗಳ ಪೈಕಿ 2,506 ವಿದ್ಯಾರ್ಥಿಗಳು ಶೇ.28.31 ರಷ್ಟು ಇಂದು ತರಗತಿಗೆ ಹಾಜರಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಚಿದಂಬರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

01/01/2021 07:54 pm

Cinque Terre

43.73 K

Cinque Terre

0

ಸಂಬಂಧಿತ ಸುದ್ದಿ