ಹುಬ್ಬಳ್ಳಿ: ಅಂತೂ ಇಂತೂ ಶಾಲಾ ಕಾಲೇಜು ಪ್ರಾರಂಭಗೊಂಡಿದ್ದು,ಶಿಕ್ಷಕರಲ್ಲಿ ಹಾಗೂ ಮಕ್ಕಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಂತೋಷ ಮೊಳಕೆ ಒಡೆದಿದೆ.ಇಷ್ಟು ದಿನ ಮನೆಯಲ್ಲಿಯೇ ಇದ್ದ ಮಕ್ಕಳು ಶಾಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿಗಳು ಮದುವಣಗಿತ್ತಿಯಂತೆ ಶಾಲೆಯನ್ನು ಶೃಂಗರಿಸಿ ಮಕ್ಕಳಿಗೆ ಸ್ವಾಗತಿಸಿದರು.
ಹೌದು..ಶಾಲಾ ಕಾಲೇಜು ಆರಂಭಗೊಂಡಿರುವುದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹೊಸ ವರ್ಷ ಆಚರಣೆ ಸಂಭ್ರಮಕ್ಕೆ ಹೊಸ ಹುರುಪು ಸಿಕ್ಕಂತಾಗಿದೆ.ದೇಶಪಾಂಡೆ ನಗರದ ಜ್ಞಾನಭಾರತಿ ಶಾಲೆಯಲ್ಲಿ ತಳಿರು ತೋರಣದ ಮೂಲಕ ಶೃಂಗಾರಗೊಳಿಸಿದ್ದು, ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ವಿದ್ಯಾರ್ಥಿಗಳಲ್ಲಿರುವ ಕೊರೋನಾ ಭಯವನ್ನು ಹೋಗಲಾಡಿಸಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದುವಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲೆಯತ್ತ ಸೆಳೆಯಲು ವಿನೂತನ ಪ್ರಯತ್ನ ನಡೆಸಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.
Kshetra Samachara
01/01/2021 01:52 pm