ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿದ್ಯಾಗಮಕ್ಕೆ ಧಾರವಾಡದಲ್ಲಿ ಸಕಲ ಸಿದ್ಧತೆ

ಧಾರವಾಡ: ಜನೆವರಿ 1 ರಿಂದ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಹಾಗೂ 6 ರಿಂದ 9 ನೇಯ ತರಗತಿ ಮಕ್ಕಳಿಗೆ ವಿದ್ಯಾಗಮ 2ರ ಪ್ರಾರಂಭಕ್ಕೆ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ, ಕಾಲೇಜುಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ಶಹರ ಹಾಗೂ ಗ್ರಾಮೀಣ ಪ್ರದೇಶದ ಅನೇಕ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಕೋವಿಡ್ 19 ರ ತಡೆಗೆ ಸರ್ಕಾರದ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅಳವಡಿಸಿರುವುದನ್ನು ಪರಿಶೀಲಿಸಿದ್ದಾರೆ.

ಕರಡಿಗುಡ್ಡ, ಲಕಮಾಪುರ, ಯಾದವಾಡ, ಧಾರವಾಡದ ಆರ್.ಎನ್. ಕ್ರೀಡಾಂಗಣದ ಬಳಿಯ ಸರ್ಕಾರಿ ಪ್ರೌಢಶಾಲೆ, ಕೆ.ಇ.ಬೋರ್ಡ್ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಸೇರಿದಂತೆ ಅನೇಕ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ, ಪುನರಾರಂಭಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ಸರದಿ ಸಾಲಿನಲ್ಲಿ ಬರಲು ಚೌಕಾಕಾರದ ಗುರುತುಗಳು, ಕೊಠಡಿಗಳ ಸ್ಯಾನಿಟೈಸೇಷನ್, ಐಸೋಲೇಷನ್ ರೂಮ್, ಶೌಚಾಲಯ ಮತ್ತಿತರ ವ್ಯವಸ್ಥೆಗಳನ್ನು ಕೂಲಂಕಷವಾಗಿ ವೀಕ್ಷಿಸಿದರು.

ಎಲ್ಲಾ ಪಾಲಕರ ಸಭೆ ನಡೆಸಿ ಅವರಿಂದ ಒಪ್ಪಿಗೆ ಪತ್ರ ಪಡೆಯಬೇಕು. ಮಕ್ಕಳು ಒಟ್ಟುಗೂಡಿ ಸಂದಣಿ ಉಂಟು ಮಾಡಬಾರದು. ಪ್ರಾರ್ಥನೆ, ಊಟ,ಉಪಹಾರಕ್ಕೆ ಅವಕಾಶ ಬೇಡ.ಆಹಾರ ಧಾನ್ಯ ಮಕ್ಕಳಿಗೆ ಮನೆಗೆ ಕಳುಹಿಸಿಕೊಡಬೇಕು. ಮನೆಯಿಂದ ತಂದ ಬಿಸಿ ನೀರು ಕುಡಿಯಲು ಹೇಳಬೇಕು. ಮಕ್ಕಳಲ್ಲಿ ಕೋವಿಡ್ ಭೀತಿ ಉಂಟಾಗದಂತೆ ಭರವಸೆ ತುಂಬಬೇಕು. ಪರೀಕ್ಷಾ ಭಯ ಬೇಡ, ಇರುವ ಅವಧಿಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ ಎಂದು ಜಿಪಂ ಸಿಇಓ ಡಾ.ಬಿ.ಸುಶೀಲಾ ಅವರು ಶಿಕ್ಷಕರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ 6 ರಿಂದ 10ನೇ ತರಗತಿಯ ಒಟ್ಟು 653 ಸರಕಾರಿ ಶಾಲೆಗಳಲ್ಲಿ 65864 ಮಕ್ಕಳು , 220 ಅನುದಾನಿತ ಶಾಲೆಗಳಲ್ಲಿ 42056 ಮಕ್ಕಳು ಹಾಗೂ 296 ಅನುದಾನರಹಿತ ಶಾಲೆಗಳಲ್ಲಿ 53532 ಮಕ್ಕಳು ಹಾಜರಾಗಲಿದ್ದಾರೆ. ಅಂದರೆ ಜಿಲ್ಲೆಯ 6 ರಿಂದ 10 ನೆಯ ತರಗತಿಯ ಒಟ್ಟು 1169 ಶಾಲೆಗಳಲ್ಲಿ 161452 ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ. ಇವರಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೂ ಸೇರಿದ್ದಾರೆ.

Edited By : Manjunath H D
Kshetra Samachara

Kshetra Samachara

31/12/2020 08:16 pm

Cinque Terre

61.22 K

Cinque Terre

5

ಸಂಬಂಧಿತ ಸುದ್ದಿ