ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಮತಿ ವೀಣಾ ಅಠವಲೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಬೆಂಗಳೂರು : ದಿ ನ್ಯೂಜ್ ಪೇಪರ್ಸ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಕರ್ನಾಟಕ ಮಾಧ್ಯಮ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ಧಾರವಾಡ ಜಿಲ್ಲೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವೀಣಾ ಆರ್ ಅಠವಲೆ ಅವರೂ ಗೌರವ ಸ್ವೀಕರಿಸಿದ್ದು ಹೆಮ್ಮೆ ವಿಷಯ. ನವೆಂಬರ್ ತಿಂಗಳಿನಲ್ಲಿ ನಡೆಯಬೇಕಾದ ಈ ಕಾರ್ಯಕ್ರಮ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು.

ಈ ನಾಡಿನ ನಾಡು, ನುಡಿ, ನೆಲ, ಜಲ, ಸಂಸ್ಕ್ರತಿ, ಸಾಹಿತ್ಯದ ಸಂರಕ್ಷಣೆಗೆ ಹಾಗೂ ಕನ್ನಡಪರ ಹೋರಾಟದಲ್ಲಿ ಕ್ರಿಯಾಶೀಲರಾಗಿ, ಸೃಜನಶೀಲರಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಚಲನಚಿತ್ರ ಕ್ಷೇತ್ರ, ವ್ಯದ್ಯಕೀಯ, ಸರ್ಕಾರಿ, ವ್ಯಾಪಾರ ವಾಣಿಜ್ಯ, ಹಾಗೂ ಇನ್ನತರೇ ಕ್ಷೇತ್ರಗಳ ಅಭಿವೃದ್ಧಿಗಾಗಿ ಗಣನೀಯ ಸೇವೆಯನ್ನು ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಭಾನುವಾರ ದಿ. 27 ರಂದು ಬೆಂಗಳೂರು ಮೆಡಿಕಲ್ ಕಾಲೇಜ್ ಆವರಣದ ಬಿಎಸಿ ಸಭಾಂಗಣದಲ್ಲಿ ಜರುಗಿದ ಭವ್ಯ ಸಮಾರಂಭಧಲ್ಲಿ 2020 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಚಿವರು ವೈದ್ಯಕೀಯ ಶಿಕ್ಷಣ ಡಾ. ಕೆ ಸುಧಾಕರ್ ಮಾನ್ಯ ಕರ್ನಾಟಕ ಸರ್ಕಾರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

Edited By :
Kshetra Samachara

Kshetra Samachara

29/12/2020 06:02 pm

Cinque Terre

12.77 K

Cinque Terre

0

ಸಂಬಂಧಿತ ಸುದ್ದಿ