ಕಲಘಟಗಿ ಪಟ್ಟಣದ ಕೆರೆ ಓಣಿಯಲ್ಲಿರುವ ಈ ಪುಟ್ಟ ಬಾಲಕನ ಟ್ಯಾಲೆಂಟಗೆ ಎರಡು ಅವಾರ್ಡ್ ದೊರೆತಿವೆ. ಹಾಗಾದರೆ ಆ ಪುಟ್ಟ ಬಾಲಕ ಯಾರು ಅಂತಿರ ಇಲ್ಲಿದೆ ನೋಡಿ..
ಇವನೆ ನೋಡಿ ತನಿಜ ಯಾದವಾಡ ಇತನ ವಯಸ್ಸು ಕೆವಲ 2.5 ವರ್ಷ ಇತನಿಗೆ ಪುಸ್ತಕದಲ್ಲಿ ಇರುವ ಚಿತ್ರಗಳ ಹೆಸರನ್ನು ಒಂದು ಬಾರಿ ತಿಳಿಸಿದರೆ ಸಾಕು ಎಲ್ಲವು ತಲೆಯಲ್ಲಿ ಇಟ್ಟುಕೊಂಡು ಮರಳಿ ಕೆಳಿದರೆ ಥಟಂತ ಉತ್ತರ ನಿಡುತ್ತಾನೆ.
ಸದ್ಯ ಬಾಲಕನ ಟ್ಯಾಲೆಂಟ್ ಮೆಚ್ಚಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನವರು ಇವನಿಗೆ ಅವಾರ್ಡ್ ನಿಡಿದ್ದಾರೆ. ಇದಾದ ನಂತರ ಕರ್ನಾಟಕ ಅಚಿವರ್ ಬುಕ್ ಆಫ್ ರೆಕಾರ್ಡ್ ನವರು ಕೂಡ ಇತನಿಗೆ ಅವಾರ್ಡ್ ನೀಡಿದ್ದು ವಿಶೇಷವಾಗಿದೆ.
ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಇವನ ತಂದೆ ನಯಾಜ ಯಾದವಾಡ ಹಾಗೂ ತಾಯಿ ತಬಸುಮ ಯಾದವಾಡ ಮನೆ ಕೆಲಸ ಮಾಡಿಕೊಂಡಿದ್ದಾರೆ.ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವಾರ್ಡ್ ಗಳನ್ನು ತೆಗೆದುಕೊಂಡಿರುವ ಮಗನ ಟ್ಯಾಲೆಂಟಗೆ ತಂದೆ ತಾಯಿ ಹಾಗೂ ಅಜ್ಜ ಅಜ್ಜಿ ಮತ್ತು ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.
ವರದಿ: ಉದಯ ಗೌಡರ
Kshetra Samachara
12/09/2022 12:15 pm