ಹುಬ್ಬಳ್ಳಿ: ಇರುವ ಊರಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಬೇರೆ ಊರಿನತ್ತ ಯಾಕೆ ಹೋಗಬೇಕು ಎಂಬುವಂತ ಮಾತಿಗೆ ಅನುಗುಣವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೊಂದು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ಸಾಧಿಸುವ ಪ್ರತಿಭೆಗಳಿಗೆ ನೀರೆರದು ಪೋಷಣೆ ಮಾಡುವ ಮೂಲಕ ಶಿಕ್ಷಣ ಸಂಸ್ಥೆ ಹುಬ್ಬಳ್ಳಿಯನ್ನೇ ಶಿಕ್ಷಣ ಕಾಶಿಯೆಂದು ಪರಿವರ್ತನೆ ಮಾಡುವತ್ತ ಚಿಂತನೆ ನಡೆಸಿವೆ.
ಹೌದು...ವಾಣಿಜ್ಯನಗರಿ ಹುಬ್ಬಳ್ಳಿಯ ಶಿರೂರ ಪಾರ್ಕಿನಲ್ಲಿರುವ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಬೇರೆ ಕೋಚಿಂಗ್ ಸೆಂಟರ್ ಗಳಿಗಿಂತಲೂ ವಿಭಿನ್ನವಾದ ರೀತಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹಿಸಿ Rank ಪಡೆಯುವತ್ತ ವಿದ್ಯಾರ್ಥಿಗಳನ್ನು ಕೊಂಡೊಯ್ಯಲು ಸಂಸ್ಥೆ ಶ್ರಮಿಸುತ್ತಿದೆ.
ಪೋಷಕರಲ್ಲಿ ಅರಿವನ್ನು ಮೂಡಿಸಿ ಹುಬ್ಬಳ್ಳಿಯಲ್ಲಿರುವ ವಿದ್ಯಾಸಂಸ್ಥೆಗಳಲ್ಲಿಯೇ ಸಾಧನೆಯನ್ನು ಕಂಡುಕೊಳ್ಳುವಂತೆ ಇಂಪಲ್ಸ್ ಪಿಯು ಕಾಲೇಜು ಕಾರ್ಯನಿರ್ವಹಿಸುತ್ತಿದೆ.ಉತ್ತಮ ಉಪನ್ಯಾಸಕ ಹಾಗೂ ನುರಿತ ಸಿಬ್ಬಂದಿಗಳನ್ನು ಹೊಂದಿರುವ ಈ ಶಿಕ್ಷಣ ಸಂಸ್ಥೆ ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಶಿಕ್ಷಣ ಕಾಶಿಯನ್ನಾಗಿ ಮಹತ್ವದ ಕನಸನ್ನು ಹೊಂದಿದ್ದು,ಅದೇ ಮಾರ್ಗದಲ್ಲಿಯೇ ಶ್ರಮಿಸುತ್ತಿದೆ.ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಕನಸಾಗಿರುವ NEET-JEE-IIT ಗಳಂತ ಸಾಧನೆಯತ್ತ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದೆ.
ಪ್ರತಿಯೊಬ್ಬ ಪಾಲಕರಲ್ಲಿಯೂ ಮಕ್ಕಳನ್ನು ದೂರದ ಊರಿನಲ್ಲಿ ಇಟ್ಟು ಓದಿಸಬೇಕು ಎಂಬುವಂತ ಮಾತಿಗೆ ಪ್ರತ್ಯುತ್ತರವಾಗಿ ಈಗ ಹೊರಗಿನ ಕೋಚಿಂಗ್ ಸೆಂಟರ್ ಗಳಿಗಿಂತ ಭಿನ್ನವಾಗಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ನೀಡುವ ಮೂಲಕ ಪಾಲಕರ ಮನವೊಲಿಸಿ ಹುಬ್ಬಳ್ಳಿಯಲ್ಲಿಯೇ ಸಾಧನೆ ಮಾಡುವಂತೆ ಪ್ರೇರಿಪಿಸಲಾಗುತ್ತಿದೆ.ವ್ಯವಸ್ಥಿತ ಶಿಕ್ಷಣದ ಮಾನದಂಡದ ಮೂಲಕ ಬೆಳೆಯುವ ಸಿರಿಯಂತಿರುವ ಮಕ್ಕಳಿಗೆ ಬೃಹತ್ ಕನಸನ್ನು ಕಟ್ಟಿಕೊಟ್ಟು ಯಶಸ್ಸಿನತ್ತ ಕೊಂಡೊಯ್ಯಲು ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಶ್ರಮಿಸುತ್ತಿದೆ.
ಇನ್ನೂ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಸಿದ್ಧಯಗೊಳಿಸಿ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸುವ ಜಟ್ಟಿಗಳಂತೆ ಸಿದ್ಧಪಡಿಸಿ ಹಳ್ಳಿಯಿಂದ ಪಟ್ಟಣಕ್ಕೆ ಹೋಗುವ ದಾರಿಯನ್ನು ಪಟ್ಟಣದಿಂದ ಹಳ್ಳಿಯತ್ತ ಕರೆತರುವಂತೆ ಹುಬ್ಬಳ್ಳಿಯಿಂದ ಬೇರೆ ಕಡೆಗೆ ಹೋಗುವ ವಿದ್ಯಾರ್ಥಿಗಳನ್ನು ಹುಬ್ಬಳ್ಳಿಗೆ ಕರೆತಂದು ಸಾಧಿಸುವ ಮಹಾ ಕನಸನ್ನು ಶಿಕ್ಷಣ ಸಂಸ್ಥೆ ಹೊಂದಿದೆ.
ಶಿಕ್ಷಣ ಸಂಸ್ಥೆಯ ಸಾಧನೆ ಸಿಬ್ಬಂದಿಗಳಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಿಗೂ ಕೂಡ ಆತ್ಮಸ್ಥೈರ್ಯ ಹೆಚ್ಚಿಸಿದ್ದು,ಮುಂಬರುವ ದಿನಗಳಲ್ಲಿ ಹುಬ್ಬಳ್ಳಿಯೇ ಶಿಕ್ಷಣ ಕಾಶಿಯಾಗಿ ಪರಿವರ್ತನೆಯಾಗಲಿದೆ.
Kshetra Samachara
16/01/2021 04:34 pm